ಅಪಘಾತ ಪ್ರಕರಣ: 22 ಜನರ ಸಾವಿಗೆ ಕಾರಣನಾದ ಬಸ್‌ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ ವಿಧಿಸಿದ ಮಧ್ಯಪ್ರದೇಶದ ಕೋರ್ಟ್‌..!

ಭೋಪಾಲ್‌: ಅತಿ ವೇಗದ ಬಸ್‌ ಚಾಲನೆಯ ಕಾರಣದಿಂದ 22 ಜನರ ಸಾವಿಗೆ ಕಾರಣವಾಗಿದ್ದ ಚಾಲಕ ಶಂಸುದ್ದೀನ್‌ ಎಂಬಾತನಿಗೆ ಮಧ್ಯಪ್ರದೇಶದ ಸ್ಥಳೀಯ ವಿಶೇಷ ನ್ಯಾಯಾಲಯವೊಂದು, 190 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
19 ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ವರ್ಷದಂತೆ ಒಟ್ಟು 190 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಅಲ್ಲದೆ, ಎಲ್ಲ ಶಿಕ್ಷೆಗಳನ್ನೂ ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ಕೋರ್ಟ್‌ ಆದೇಶಿಸಿರುವುದರಿಂದ ಚಾಲಕ ಶಂಸುದ್ದೀನ್‌ ತಲಾ 10 ವರ್ಷದ 19 ಶಿಕ್ಷೆಗಳನ್ನು 190 ವರ್ಷ ಕಾಲ ಅನುಭವಿಸಬೇಕಾಗುತ್ತದೆ.
ಅಪಘಾತ ಪ್ರಕರಣಗಳಲ್ಲಿ ಬಹುಶಃ ದೇಶದಲ್ಲಿ ಇಷ್ಟು ದೀರ್ಘಾವಧಿ ಶಿಕ್ಷೆ ವಿಧಿಸಿದ್ದು ಇದೇ ಮೊದಲು ಎಂದು ಹೇಳಬಹುದಾಗಿದೆ, ಇದೇ ವೇಳೆ, ಬಸ್‌ ಮಾಲೀಕನಿಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ವಿವರ..
ಮೇ 4, 2015ರಂದು ಖಾಸಗಿ ಬಸ್‌ ಚಾಲಕ ಶಂಸುದ್ದೀನ್‌ (47) ಅತಿ ವೇಗವಾಗಿ ಬಸ್‌ ಚಾಲನೆ ಮಾಡಿದ ಪರಿಣಾಮ, ನಾಲೆಗೆ ಬಸ್‌ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಬಸ್‌ನಲ್ಲಿದ್ದ 65 ಜನರಲ್ಲಿ 22 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಅನೇಕರು ಗಾಯಗೊಂಡಿದ್ದರು. ಈ ಬಸ್‌ನಲ್ಲಿದ್ದ ತುರ್ತು ನಿರ್ಗಮನ ದ್ವಾರವನ್ನು ಸಹಾ ಕಬ್ಬಿಣದ ರಾಡ್‌ಗಳಿಂದ ಬಂದ್‌ ಮಾಡಿ ಹೆಚ್ಚುವರಿ ಸೀಟ್‌ ಅಳವಡಿಸಲಾಗಿತ್ತು. ಇದರಿಂದಾಗಿ ಜನರಿಗೆ ಬಸ್ಸಿನಿಂದ ಹೊರ ಬರಲು ಕಷ್ಟಸಾಧ್ಯವಾಗಿತ್ತು.
ಇದಕ್ಕೆ ಬಸ್‌ ಚಾಲಕ ಅತಿ ವೇಗವಾಗಿ ಬಸ್‌ ಚಾಲನೆ ಕಾರಣ ಹಾಗೂ ಬಸ್ಸಿನಲ್ಲಿ ಸಾಕಷ್ಟು ಸುರಕ್ಷತಾ ಲೋಪಗಳಿದ್ದವು ಎಂದು ಆರೋಪಿಸಿ ಪೊಲೀಸರು, ನಿರ್ಲಕ್ಷ್ಯದ ಚಾಲನೆ, ಉದ್ದೇಶಪೂರ್ವಕವಲ್ಲದ ಕೊಲೆ, ಅತಿವೇಗದ ಚಾಲನೆಯಿಂದ ಸಾವು ಎಂದು ಪ್ರಕರಣ ದಾಖಲಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

2

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement