ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು…ಬೆಂಗಳೂರಿನಲ್ಲಿಯೇ ಶೇ.75ಕ್ಕೂ ಹೆಚ್ಚು ಪ್ರಕರಣಗಳು ದಾಖಲು..!

ಬೆಂಗಳೂರು: ಕರ್ನಾಟಕವು ಶನಿವಾರ ಕೋವಿಡ್ ಪ್ರಕರಣಗಳಲ್ಲಿ 1,000 ಗಡಿ ದಾಟಿದ್ದು, 1,033 ಹೊಸ ಪ್ರಕರಣಗಳು ದಾಖಲಾಗಿತ್ತು. ಅದು ಭಾನುವಾರ ೧೧೮೭ ದೈನಂಧಿನ ಪ್ರಕರಣಗಳಿಗೆ ಏರಿದೆ.ರಾಜಧಾನಿ ಬೆಂಗಳೂರಿನಿಂದಲೇ ಶೇ.75ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಒಟ್ಟಾರೆ ಕರ್ನಾಟಕದ ಪ್ರಕರಣಗಳಿಗೆ ಬೆಂಗಳೂರಿನ ಕೊಡುಗೆಯೇ ಹೆಚ್ಚು..! ಹೀಗಾಗಿ ನಗರದಲ್ಲಿ ಸರ್ಕಾರ ಕಠಿಣ ನಿರ್ಬಂಧಗಳನ್ನು ವಿಧಿಸುವುದರ ಬಗ್ಗೆ ಚಿಂತನೆ ನಡೆಸಿದೆ.
ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಹೊಸದಾಗಿ ಕೇವಲ 172 ಕೋವಿಡ್‌ ಸೋಂಕಿತ ಪ್ರಕಣಗಳು ವರದಿಯಾಗಿದ್ದವು. ಆದರೆ ಒಂದೇ ವಾರದೊಳಗೆ ಅಂದರೆ ಜನವರಿ 2ರಂದು ಕರ್ನಾಟಕದಲ್ಲಿ ಹೊಸದಾಗಿ ವರದಿಯಾದ 1187 ಕೊರೊನಾ ಸೋಂಕಿತ ಪ್ರಕರಣಗಳಲ್ಲಿ 923 ಹೊಸ ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗಿವೆ.. ಅಂದರೆ ಕೇವಲ ಏಳು ದಿನಗಳಲ್ಲಿ ಐದು ಪಟ್ಟಿಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದರೆ ಸೋಂಕು ಹರಡುತ್ತಿರುವ ವೇಗವನ್ನು ಗಮನಿಸಬಹುದಾಗಿದೆ.
ಕಳೆದ ಏಳು ದಿನಗಳಲ್ಲಿ ರಾಜ್ಯದಲ್ಲಿ 4,970 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 3,795 ಪ್ರಕಣಗಳು ಬೆಂಗಳೂರಿನಲ್ಲೇ ದಾಖಲಾಗಿವೆ. ಅಂದರೆ ಕರ್ನಾಟಕದ ಒಟ್ಟು ಪ್ರಕರಣಗಳಲ್ಲಿ ಸರಿಸುಮಾರು 76% ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗುತ್ತಿವೆ.
ಬೆಂಗಳೂರು ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಾನಗರವಾಗಿದ್ದರಿಂದ ಸಹಜವಾಗಿಯೇ ಅಂತಾರಾಷ್ಟ್ರೀಯ ಪ್ರಯಾಣಿಕರ ಓಡಾಟವೂ ಹೆಚ್ಚಿರುತ್ತದೆ. ಬೇರೆ ಬೇರೆ ದೇಶಗಳಿಗೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಹೋಗಿ ಬರುತ್ತಾರೆ. 2021ರ ನವೆಂಬರ್‌ 1 ರಿಂದ ಇದುವರೆಗೂ ಹೈರಿಸ್ಕ್‌ ದೇಶಗಳಿಂದ ಸುಮಾರು 20,415 ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಓಮಿಕ್ರಾನ್‌ ಕಾಣಿಸಿಕೊಳ್ಳುವ ಪೂರ್ವದಲ್ಲಿ ಅವರಿಗೆ ಕಟ್ಟುನಿಟ್ಟಿನ ಪರೀಕ್ಷೆ ಮಾರ್ಗಸೂಚಿಗಳು ಇರಲಿಲ್ಲ. ಹೀಗಾಗಿ ಬಹಳ ಜನರು ಯಾವುದೇ ಪರೀಕ್ಷೆ ಇಲ್ಲದೆ ನಗರಕ್ಕೆ ಆಗಮಿಸಿದ್ದಾರೆ. ಇದು ಸಹ ಸೋಂಕಿನ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಪರೀಕ್ಷೆ ಹೆಚ್ಚಳ, ಹೀಗಾಗಿ ಹೆಚ್ಚು ಪ್ರಕರಣಗಳು ಪತ್ತೆ..
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿಯೂ ಪರೀಕ್ಷೆ ಹೆಚ್ಚಿಸಲಾಗಿದೆ. ಹೀಗಾಗಿ ಹೆಚ್ಚೆಚ್ಚು ಸೋಂಕುಗಳು ಪತ್ತೆಯಾಗುತ್ತಿವೆ ಎಂಬ ವಾದವೂ ಇದೆ. ಡಿಸೆಂಬರ್ 27ರಂದು ರಾಜ್ಯದಲ್ಲಿ ಸುಮಾರು 58 ಸಾವಿರ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಆಗ ಸೋಂಕಿತರ ಸಂಖ್ಯೆ 289 ಪ್ರಕರಣಗಳು ವರದಿಯಾಗಿತ್ತು. ಬೆಂಗಳೂರಿನಲ್ಲಿ 172 ಹೊಸ ಪ್ರಕರಣಗಳು ದಾಖಲಾಗಿದ್ದವು. ಜನವರಿ 1ರಂದು ಕರ್ನಾಟಕದಲ್ಲಿ 1.19 ಲಕ್ಷ ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಸೋಂಕಿತರ ಸಂಖ್ಯೆ 1033ಕ್ಕೆ ಏರಿಕೆಯಾಯಿತು. ಬೆಂಗಲೂರಿನಲ್ಲಿ 810 ಹೊಸ ಪ್ರಕರಣಗಳು ವರದಿಯಾದವು. ಪರೀಕ್ಷೆ ಹೆಚ್ಚಾದಂತೆ ಸೋಂಕಿತ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚೆಚ್ಚು ಪತ್ತೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement