ಭಾರತೀಯ ಸೇನಾಪಡೆಯಿಂದ ಶ್ರೀನಗರದಲ್ಲಿ ಎಲ್​ಇಟಿ ಉನ್ನತ ಕಮಾಂಡರ್, ಪಾಕಿಸ್ತಾನಿ ಉಗ್ರನ ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಶಾಲಿಮಾರ್‌ನಲ್ಲಿ ಭದ್ರತಾ ಪಡೆಗಳು ಸೋಮವಾರ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಉಗ್ರರಲ್ಲಿ ಒಬ್ಬನಾದ ಸಲೀಂ ಪರ್ರೆ ಎಂಬಾತ ಲಷ್ಕರ್ ಇ ತೈಬಾ (ಎಲ್‌ಇಟಿ) ಕಮಾಂಡರ್ ಆಗಿದ್ದ. ಇನ್ನೊಬ್ಬ ಭಯೋತ್ಪಾದಕನನ್ನು ಪಾಕಿಸ್ತಾನದ ಹಫೀಜ್ ಅಲಿಯಾಸ್ ಹಮ್ಜಾ ಎಂದು ಗುರುತಿಸಲಾಗಿದ್ದು, ಆತ ಬಂಡಿಪೋರಾದಲ್ಲಿ ಇಬ್ಬರು ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ನಮಗೆ ಶ್ರೀನಗರದ ಶಾಲಿಮಾರ್‌ನಲ್ಲಿ ಎಲ್‌ಇಟಿಯ ಉನ್ನತ ಕಮಾಂಡರ್ ಸಲೀಂ ಪರ್ರೆ ಮತ್ತು ಪಾಕಿಸ್ತಾನಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಎನ್‌ಕೌಂಟರ್‌ನಲ್ಲಿ ಆ ಉಗ್ರರನ್ನು ಹೊಡೆದುರುಳಿಸಲಾಯಿತು ಎಂದು ಕಾಶ್ಮೀರದ ಐಜಿಪಿ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಶ್ರೀನಗರ ಎನ್‌ಕೌಂಟರ್‌ನಲ್ಲಿ ಹತನಾದ ಎರಡನೇ ಭಯೋತ್ಪಾದಕ ಪಾಕಿಸ್ತಾನದ ಹಫೀಜ್ ಅಲಿಯಾಸ್ ಹಮ್ಜಾ ಬಂಡಿಪೋರಾದಲ್ಲಿ 2 ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ. ಈತ ಭಯೋತ್ಪಾದನಾ ಘಟನೆಯ ನಂತರ ಶ್ರೀನಗರದ ಹರ್ವಾನ್ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದ.
ಗುರುವಾರ ರಾತ್ರಿ ಶ್ರೀನಗರದಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆಗೈದ ಕೇವಲ ಮೂರು ದಿನಗಳ ನಂತರ ಕಾರ್ಯಾಚರಣೆ ನಡೆದಿದೆ. ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 36 ಗಂಟೆಗಳ ಅವಧಿಯಲ್ಲಿ 9 ಭಯೋತ್ಪಾದಕರನ್ನು ಹತ್ಯೆ ಮಾಡಿತ್ತು. ಶ್ರೀನಗರದ ಪಂಥಾ ಚೌಕ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement