ಹುಬ್ಬಳ್ಳಿ: ಭಾರತೀಯ ಕಿಸಾನ್‌ ಸಂಘದ ಎರಡು ದಿನಗಳ ಕರ್ನಾಟಕ ಉತ್ತರ ಪ್ರಾಂತ ರೈತ ಸಮ್ಮೇಳನ ಉದ್ಘಾಟನೆ

ಹುಬ್ಬಳ್ಳಿ: ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಘಟಕದ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಕರ್ನಾಟಕ ಉತ್ತರ ಪ್ರಾಂತ ರೈತ ಸಮ್ಮೇಳನ-೨೦೨೨ ಗೋ ಪೂಜೆಯೊಂದಿಗೆ ಸೋಮವಾರ ಆರಂಭವಾಯಿತು.
ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಎಂಟನೂರು ದೇಶಿ ಗೋವುಗಳ ಸಂರಕ್ಷರ ಭರಮಣ್ಣ ಗುರಿಕಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗೋವುಗಳು ದೇವರಿದ್ದಂತೆ. ಬಹುಪಯೋಗಿಯಾಗಿವೆ. ಪ್ರತಿಯೊಬ್ಬರೂ ಮನೆಗೊಂದು ಗೋವನ್ನು ಸಾಕುವ ಸಂಕಲ್ಪ ಮಾಡಬೇಕು ಎಂದರು.
ಗದಗ ಶಿವಾನಂದ ಮಠದ ಶ್ರೀ ಸದಾಶಿವಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಭಾರತೀಯ ಕಿಸಾನ್ ಸಂಘದ ಅಖಿಲ ಭಾರತ ಅಧ್ಯಕ್ಷ ಐ.ಎನ್.ಬಸವೇಗೌಡ, ಸಂಘದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ, ಸಂಘದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದೊಣೂರ ರಾಮು , ಪ್ರಮುಖರಾದ ವೀಣಾ ಸತೀಶ, ಗಂಗಾಧರ ಕಾಸರಘಟ್ಟ, ಪರಮೇಶ್ವರಪ್ಪ, ವಿವೇಕ ಮೋರೆ, ದಕ್ಷಿಣ ಪ್ರಾಂತ ಅಧ್ಯಕ್ಷ ರಾಜೇಂದ್ರ ರಾಮಾಪುರ ಇದ್ದರು.
ಸಮ್ಮೇಳನ ಸಂಚಾಲಕ ರಮೇಶ ಕೊರವಿ ಸ್ವಾಗತಿಸಿದರು.
ಭಾರತೀಯ ಕಿಸಾನ್ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ವೀರಣ್ಣ ಮಜ್ಜಗಿ ಪ್ರಾಸ್ತಾವಿಕ ಮಾತನಾಡಿದರು.ರಾಘವೇಂದ್ರ ಜಹಗೀರದಾರ ನಿರ್ವಹಿಸಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement