ಕೋವಿಡ್ ಪ್ರಕರಣದಲ್ಲಿ ಹೆಚ್ಚಳ: ಬೆಡ್​ಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರದಿಂದ ಸೂಚನೆ

ಕೋವಿಡ್ ಪ್ರಕರಣದಲ್ಲಿ ಹೆಚ್ಚಳ: ಶೇ.30ರಷ್ಟು ಬೆಡ್​ಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರದಿಂದ ಸೂಚನೆ
ಬೆಂಗಳೂರು: ಕೊರೊನಾ 3ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಖಾಸಗಿ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ತಕ್ಷಣದಿಂದ ಶೇ 30ರಷ್ಟು ಬೆಡ್​ಗಳನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ರಾಜ್ಯ ಸರ್ಕಾರವು ಆದೇಶಿಸಿದೆ.
ಜನೇವರಿ 7ರ ಒಳಗಾಗಿ ಪ್ರತಿ ವರ್ಗದ ಶೇಕಡಾ 50 ಹಾಸಿಗೆಗಳ ಸಂಪೂರ್ಣ ಉಲ್ಲೇಖ, ಅಂದರೆ, ವೆಂಟಿಲೇಟರ್‌ನೊಂದಿಗೆ ಐಸಿಯು, ಎಚ್‌ಡಿಯು (HDU)/ಆಮ್ಲಜನಕಯುಕ್ತ ಮತ್ತು ಖಾಸಗಿ ಆಸ್ಪತ್ರೆಗಳ ಸಾಮಾನ್ಯ ಹಾಸಿಗೆಗಳು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸೂಚಿಸಿದ ಕೋವಿಡ್‌-19 ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಬೇಕು..

ಜನೇವರಿ 10ರ ಒಳಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ 75%ರಷ್ಟು ಬೆಡ್​ಗಳನ್ನು ಮೀಸಲಿಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆರೋಗ್ಯ ಇಲಾಖೆಯಿಂದ ಶಿಫಾರಸಾಗುವ ರೋಗಿಗಳ ಚಿಕಿತ್ಸೆಗೆ ಈ ಬೆಡ್​ಗಳು ಮೀಸಲಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

ನಿಮ್ಮ ಕಾಮೆಂಟ್ ಬರೆಯಿರಿ

advertisement