ಸಾವಿರಾರು ಅನಾಥರ ‘ಮಾಯಿʼ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ

ಪುಣೆ: ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧೂತಾಯಿ ಸಪ್ಕಾಲ್ ಪುಣೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
74 ವರ್ಷದ ಸಿಂಧೂತಾಯಿ ಸಪ್ಕಾಲ್ ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ 8.10ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
“ಮಾಯಿ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಪ್ಕಾಲ್, ಪುಣೆಯಲ್ಲಿ ಸನ್ಮತಿ ಬಾಲ ನಿಕೇತನ ಸಂಸ್ಥೆ – ಅನಾಥಾಶ್ರಮ ಹಾಗೂ ಪ್ರಭುನೆ ಪುನರುತ್ತನ್ ಸಮರಸತಾ ಗುರುಕುಲಂ ಎಂಬ ಎನ್‌ಜಿಒವನ್ನು ನಡೆಸುತ್ತಿದ್ದಾರೆ. ಅವರ ಎನ್‌ಜಿಒ (NGO) ಪಾರ್ಧಿ ಸಮುದಾಯ ಮತ್ತು ಅವರ ಮಕ್ಕಳ ಉನ್ನತಿಗಾಗಿ ಕೆಲಸ ಮಾಡುತ್ತದೆ. ಅವರು ಪಾರ್ಧಿ ಮಕ್ಕಳಿಗಾಗಿ ಶಾಲೆ ಮತ್ತು ಹಾಸ್ಟೆಲ್‌ ಸಹ ನಡೆಸುತ್ತಿದ್ದಾರೆ.
ಸಪ್ಕಾಲ್ ತನ್ನ ಸುದೀರ್ಘ ವೃತ್ತಿಜೀವನದಲ್ಲಿ 1,000 ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ದತ್ತು ಪಡೆದಿದ್ದಾರೆ ಮತ್ತು ಅವರ ಸಾಮಾಜಿಕ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
2010ರಲ್ಲಿ, ಮಹಾರಾಷ್ಟ್ರದಲ್ಲಿ ‘ಮಿ ಸಿಂಧುತೈ ಸಪ್ಕಲ್ ಬೋಲ್ತೆ’ ಎಂಬ ಶೀರ್ಷಿಕೆಯ ಸಪ್ಕಾಲ್‌ನ ಮರಾಠಿ ಜೀವನಚರಿತ್ರೆ ಬಯೊಪಿಕ್‌ ಬಿಡುಗಡೆಯಾಯಿತು.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement