ಕರ್ನಾಟಕದಲ್ಲಿ 5000 ದಾಟಿದ ದೈನಂದಿನ ಕೊರೊನಾ ಸೋಂಕು, ಪಾಸಿಟಿವಿಟಿ ದರದಲ್ಲಿಯೂ ಹೆಚ್ಚಳ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಗುರುವಾರವೂ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಗುರುವಾರ ಒಂದೇ ದಿನ 5031 ಜನರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 4324 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ..
ರಾಜ್ಯದಲ್ಲಿ ಗುರುವಾರ 271 ಮದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 30,22,603 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,62,043 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಂದು ಕೊವಿಡ್​ನಿಂದ ಒಬ್ಬರು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಸಕಾರಾತ್ಮಕ ದರ ಶೇ 3.95 ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 22,000 ದಾಟಿದೆ. ಮರಣ ಪ್ರಮಾಣ ಶೇ 0.01 ಇದೆ.
ಬೆಂಗಳೂರು ನಗರದಲ್ಲಿ 4324 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರಸ್ತುತ 18,913 ಸಕ್ರಿಯ ಪ್ರಕರಣಗಳಿವೆ. ಈವರೆಗೆ 12,76,374 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,41,046 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 16,414 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ…
ಬೆಂಗಳೂರು ನಗರ -4324, ಬೆಂಗಳೂರು ಗ್ರಾಮಾಂತರ-25, ಬೆಳಗಾವಿ 64, ಬೀದರ -3, ಚಾಮರಾಜನಗರ- 2, ಚಿತ್ರದುರ್ಗ- 4, ದಕ್ಷಿಣ ಕನ್ನಡ -106, ದಾವಣಗೆರೆ-3, ಮಂಡ್ಯ -66, ಮೈಸೂರು- 65, ಧಾರವಾಡ -48, ಹಾಸನ -47, ಕಲಬುರಗಿ -25, ಬಳ್ಳಾರಿ -21, ಚಿಕ್ಕಬಳ್ಳಾಪುರ-20, ಶಿವಮೊಗ್ಗ 16, ಗದಗ 11, ಕೊಡಗು 19, ಕೋಲಾರ 14, ತುಮಕೂರು -20, ಉತ್ತರ ಕನ್ನಡ -13, ಉಡುಪಿ -92, ವಿಜಯಪುರ -11, ಚಿಕ್ಕಮಗಳೂರು -9, ರಾಮನಗರ-3

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement