ದೀರ್ಘ ಕಾಲದ ತನ್ನ ಸಹಚರ ನವಿಲಿನ ಮರಣದ ನಂತರವೂ ಅದನ್ನು ಬಿಟ್ಟುಬರಲು ಒಪ್ಪದ ಮತ್ತೊಂದು ನವಿಲು…! ಹೃದಯಸ್ಪರ್ಶಿ ದೃಶ್ಯ ವಿಡಿಯೊದಲ್ಲಿ ಸೆರೆ | ವೀಕ್ಷಿಸಿ

ಸಾವು ಮನುಷ್ಯರಿಗೆ, ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಯಾರಿಗೇ ಆದರೂ ಅತ್ಯಂತ ನೋವಿನ ಸಂಗತಿಯಾಗಿದೆ. ಪ್ರಪಂಚದ ಹೆಚ್ಚಿನ ಜೀವಿಗಳು ಮನುಷ್ಯರಂತೆ ನೋವನ್ನು ಅನುಭವಿಸುತ್ತವೆ ಎಂದು ಹಲವಾರು ನಿದರ್ಶನಗಳು ತೋರಿಸುತ್ತವೆ. ಈಗ ಅಂಥದ್ದೇ ಒಂದು ನಿದರ್ಶನದ ವಿಡಿಯೊವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಇದು ಮಾನವರಿಗೆ ಸಂಬಂಧಪಟ್ಟ ವಿಡಿಯೊವಲ್ಲ, ಬದಲಿಗೆ ನವಿಲೊಂದು ತನ್ನ ಸಹಚರ ನವಿಲನ್ನು ಕಳೆದುಕೊಂಡಾಗ ಹೇಗೆ ಮಮ್ಮಲ ಮರುಗಿದೆ ಎಂಬುದನ್ನು ವಿಡಿಯೊ ತೋರಿಸಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಈ ದೃಶ್ಯವನ್ನು ವಿಡಿಯೊ ಮಾಡಲಾಗಿದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ರಾಜಸ್ಥಾನದ ಕುಚೇರಾದಲ್ಲಿರುವ ರಾಮಸ್ವರೂಪ್ ಬಿಷ್ಣೋಯ್ ಅವರ ಮನೆಯಲ್ಲಿ ಮಾಡಲಾಗಿದೆ.
ಕ್ಲಿಪ್‌ನಲ್ಲಿ, ಇಬ್ಬರು ವ್ಯಕ್ತಿಗಳು ಸತ್ತ ನವಿಲನ್ನು ಬಿಳಿ ಬಟ್ಟೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವಾಗ ಮತ್ತೊಂದು ನವಿಲು ಅವರನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಆ ನವಿಲು ಸತ್ತ ನವಿಲಿನ ಶವವನ್ನು ಕೊಂಡೊಯ್ಯುತ್ತಿರುವವರನ್ನು ಹಿಂಬಾಲಿಸುತ್ತಲೇ ಇತ್ತು. “ನವಿಲು ತನ್ನ ದೀರ್ಘಕಾಲದ ಸಂಗಾತಿ ಸತ್ತ ನಂತರವೂ ಆ ಶವವನ್ನು ಬಿಟ್ಟು ಬರಲು ಬಯಸಲಿಲ್ಲ.
ನವಿಲು ತನ್ನ ಸಂಗಾತಿಯೊಂದಿಗೆ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ನವಿಲು ಸತ್ತ ನಂತರವೂ ತನ್ನ ಸಂಗಾತಿಯನ್ನು ಬಿಡಲು ನಿರಾಕರಿಸಿತು. ವಿಡಿಯೊದಲ್ಲಿ, ಇಬ್ಬರು ಪುರುಷರು ನವಿಲಿನ ಸಂಗಾತಿಯ ಮೃತದೇಹವನ್ನು ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು. ಏತನ್ಮಧ್ಯೆ, ಸತ್ತ ನವಿಲನ್ನು ಅದರ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗುವಾಗ ವಿಡಿಯೊದ ಕೊನೆಯವರೆಗೂ ಮತ್ತೊಂದು ನವಿಲುಇಬ್ಬರು ವ್ಯಕ್ತಿಗಳನ್ನು ಅನುಸರಿಸುತ್ತದೆ. ಶೀರ್ಷಿಕೆಯ ಪ್ರಕಾರ, ಅವುಗಳಲ್ಲಿ ಒಂದು ನವಿಲು ತೀರಿಕೊಂಡಾಗ, ಇನ್ನೊಂದು ನವಲಿ ತೀವ್ರ ದುಃಖಕ್ಕೊಳಗಾಯಿತು.
ಅನೇಕರು ನವಿಲು ತೋರ್ಪಡಿಸಿದ ಈ ರೀತಿಯ ಮನಕರಗುವ ಭಾವನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement