ನವದೆಹಲಿ: ಬುಲ್ಲಿ ಬಾಯಿ ಆ್ಯಪ್‌ನ ಸೃಷ್ಟಿಕರ್ತ 21 ವರ್ಷದ ನೀರಜ್ ಬಿಷ್ಣೋಯ್ ಅವರನ್ನು ದೆಹಲಿ ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಹಲವಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಆನ್ಲೈನ್‌ನಲ್ಲಿ ಹರಾಜಿಗಾಗಿ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ನೀರಜ್ ಬಿಷ್ಣೋಯ್ ಭೋಪಾಲ್‌ನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ. ಈತ ಅಸ್ಸಾಂನ ದಿಗಂಬರ್ ಜೋರ್ಹತ್ ನಿವಾಸಿ. ಅವರ ಮನೆಯಿಂದ ಆ್ಯಪ್ ರಚಿಸಿದ ಸಾಧನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ 18 ವರ್ಷದ ಶ್ವೇತಾ ಸಿಂಗ್ ಸೇರಿದಂತೆ ಮೂವರನ್ನು ಮುಂಬೈ ಪೊಲೀಸರು ಈ ಹಿಂದೆ ಬಂಧಿಸಿದ್ದರು.
ಪ್ರಕರಣದಲ್ಲಿ ಬುಧವಾರ ಮುಂಜಾನೆ ಉತ್ತರಾಖಂಡದಿಂದ ಮಯಾಂಕ್ ರಾವಲ್ (21) ಬಂಧಿತನಾಗಿದ್ದರೆ, ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ (21) ಸೋಮವಾರ ಬೆಂಗಳೂರಿನಿಂದ ಬಂಧಿಸಲ್ಪಟ್ಟಿದ್ದಾನೆ.
ನೀರಜ್ ಬಿಷ್ಣೋಯ್ ಗಿಟ್‌ಹಬ್‌ನಲ್ಲಿ ಬುಲ್ಲಿ ಬಾಯಿ ಆ್ಯಪ್ ಮಾಡಿದ ಪಾತ್ರಧಾರಿ. ಅದೇ ಹೆಸರಿನಲ್ಲಿ ಟ್ವಿಟರ್ ಹ್ಯಾಂಡಲ್ ಬಳಸುತ್ತಿರುವ ವ್ಯಕ್ತಿ. ಅವರು ಸಾಮಾಜಿಕ ಮಾಧ್ಯಮ ಪ್ರಚಾರಕರಿಗೆ ಅಪ್ಲಿಕೇಶನ್ ಕಳುಹಿಸಿದ್ದಾರೆ.ಅವರು ಅಪ್ಲಿಕೇಶನ್‌ನ ಹಿಂದಿನ ಮಾಸ್ಟರ್‌ಮೈಂಡ್ ಮತ್ತು ಸೃಷ್ಟಿಕರ್ತ. ಆತನ ಫೋನ್ ಮತ್ತು ಲ್ಯಾಪ್‌ಟಾಪ್‌ನಿಂದ ಸಾಕ್ಷ್ಯವನ್ನು ನಾವು ಕಂಡುಕೊಂಡಿದ್ದೇವೆ.
ಪೊಲೀಸ್ ಅಧಿಕಾರಿ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
“ಬುಲ್ಲಿ ಬಾಯಿ” ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರನ್ನು “ಹರಾಜಿಗೆ” ಪಟ್ಟಿ ಮಾಡಲಾಗಿದೆ ಮತ್ತು ಅನುಮತಿಯಿಲ್ಲದೆ ಛಾಯಾಚಿತ್ರಗಳನ್ನು ಪಡೆಯಲಾಗಿದೆ. ಅಪ್ಲಿಕೇಶನ್ “ಸುಲ್ಲಿ ಡೀಲ್ಸ್” ನ ತದ್ರೂಪಿಯಾಗಿ ಕಾಣಿಸಿಕೊಂಡಿತು, ಇದು ಕಳೆದ ವರ್ಷ ಇದೇ ರೀತಿಯ ವಿವಾದಕ್ಕೆ ಕಾರಣವಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ