ಸಲಿಂಗ ಮದುವೆಯಾಗುತ್ತಿರುವ ಇಬ್ಬರು ಮಹಿಳಾ ವೈದ್ಯರು…

ನಾಗ್ಪುರ:  ಮಹರಾಷ್ಟ್ರದ ಇಬ್ಬರು ಮಹಿಳಾ ವೈದ್ಯರು ಸಲಿಂಗ ವಿವಾಹಕ್ಕೆ ಸಿದ್ಧತೆ ನಡೆಸಿಕೊಂಡಿದ್ದು, ಉಂಗುರ ಬದಲಾವಣೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ಕಳೆದ ವಾರ ನಡೆದ ಸಮಾರಂಭದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ವೈದ್ಯರಾದ ಪರೋಮಿತ ಮುಖರ್ಜಿ ಮತ್ತು ಸುರಭಿ ಮಿತ್ರಾ ಅವರು ಪರಸ್ಪರ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾರೆ.
ನಾವು ಗೋವಾದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದೇವೆ ಎಂದು ಇಬ್ಬರೂ ಹೇಳಿದ್ದಾರೆ. ಪರೋಮಿತ ಮುಖರ್ಜಿ ಈ ಬಗ್ಗೆ ಹೇಳಿಕೆ ನೀಡಿ, ನನ್ನ ಲೈಂಗಿಕ ದೃಷ್ಠಿಕೋನದ ಬಗ್ಗೆ 2013ರಿಂದಲೂ ನನ್ನ ತಂದೆಗೆ ಮಾಹಿತಿ ಇತ್ತು. ನನ್ನ ತಾಯಿಗೆ ಇತ್ತೀಚೆಗೆ ನಾನು ವಿಷಯ ತಿಳಿಸಿದಾಗ ಆಕೆ ದಿಗ್ಭ್ರಾಂತರಾರು.. ಆದರೆ ನಂತರ ಒಪ್ಪಿಕೊಂಡಿದ್ದು,  ಅಂತಿಮವಾಗಿ ನಾನು ಖುಷಿಯಾಗಿರುವುದನ್ನು ಆಕೆ ಬಯಸುತ್ತಾರೆ ಎಂದು ತಿಳಿಸಿದ್ದಾರೆ.
ಸುರಭಿ ಮಿತ್ರ ಮಾತನಾಡಿದ್ದು, ನನ್ನ ಲೈಂಗಿಕ ದೃಷ್ಟಿ ಕೋನದ ಬಗ್ಗೆ ನಮ್ಮ ಕುಟುಂಬದಲ್ಲಿ ಯಾವುದೇ ವಿರೋಧ ಇಲ್ಲ. ನಾನು ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದೇನೆ. ನಾನು ಮಾನಸಿಕ ತಜ್ಞೆಯಾಗಿದ್ದು ಅನೇಕರ ಜೊತೆ ಮಾತನಾಡಿದಾಗ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗದೆ ಭಿನ್ನ ಲಿಂಗಿಯ ಜೊತೆ ಬದುಕು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ನಾನು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಮರ್ಥಳಿದ್ದೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement