ಅಗರ್ತಲದಲ್ಲಿ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಸಂಜಯಕುಮಾರ ಬಿರಾದಾರ ಆಯ್ಕೆ

ಧಾರವಾಡ: ತ್ರಿಪುರ ರಾಜ್ಯದ ಅಗರ್ತಲದಲ್ಲಿ ಜನೆವರಿ 15ರಿಂದ 21ರ ವರೆಗೆ ಆಯೋಜಿಸಿರುವ ರಾಷ್ಟ್ರೀಯ ಯುವ ಪರಂಪರೆಯ ಉತ್ಸವದಲ್ಲಿ ಧಾರವಾಡ ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಸಂಜಯಕುಮಾರ ವೈ. ಬಿರಾದಾರ ಅವರು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಕಲಾ ಯುವ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನು ತ್ರಿಪುರದ ತ್ರಿಪುರದ ಯುವ ವಿಕಾಸ ಕೇಂದ್ರವು ಆಯೋಜಿಸಿದೆ. ಸಂಜಯಕುಮಾರ ವೈ. ಬಿರಾದಾರ ಅವರು ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದವರು.  ಕರ್ನಾಟಕ ವಿಶ್ವ ವಿದ್ಯಾಲಯದ  ರಾಜ್ಯ ಶಾಸ್ತ್ರ ಹಾಗೂ ಸಾರ್ವಜನಿಕ ಆಡಳಿತದ ಸ್ನಾತಕೋತ್ತರ (ಎಂಎ) ವಿದ್ಯಾರ್ಥಿಯಾಗಿದ್ದಾರೆ.

ಸಂಜಯಕುಮಾರ ಅವರು 2019-20ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ರಾಜ್ಯಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್‌  ಸ್ವಯಂಸೇವಕ ಪ್ರಶಸ್ತಿ ಸಹ ಪಡೆದಿದ್ದಾರೆ. 2018-19ನೇ ಸಾಲಿನ ಯುಥ್‌ ಅವಾರ್ಡ್‌ಗೆ ಭಾಜನರಾಗಿದ್ದಾರೆ.

ರಾಷ್ಟ್ರೀಯ ಯುವ ಪರಂಪರೆಯ ಉತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ತೆಲಗಿ ಗ್ರಾಮ ಪಂಚಾಯತದ ಎಲ್ಲ ಸದಸ್ಯರು- ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement