ಪ್ರಧಾನಿ ಮೋದಿ ಪಾಕಿಸ್ತಾನದ ಫೈರಿಂಗ್‌ ವ್ಯಾಪ್ತಿಯಲ್ಲಿದ್ದರು’: ಬೆದರಿಕೆ ಇರಲಿಲ್ಲ ಎಂಬ ಪಂಜಾಬ್‌ ಸಿಎಂ ಹೇಳಿಕೆ ತಳ್ಳಿಹಾಕಿದ ಕಾಂಗ್ರೆಸ್‌ನ ಮನೀಶ್ ತಿವಾರಿ

ಚಂಡೀಗಢ: ಫಿರೋಜ್‌ಪುರದ ಫ್ಲೈಓವರ್ ಮೇಲೆ 20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ತಡೆಹಿಡಿಲ್ಪಟ್ಟಾಗ ಅವರ ಭದ್ರತೆಗೆ ಯಾವುದೇ ಅಪಾಯವಿರಲಿಲ್ಲ ಎಂಬ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿಕೆಯನ್ನು ಅವರದ್ದೇ ಪಕ್ಷದ ಹಿರಿಯ ನಾಯಕ ಮನೀಶ್ ತಿವಾರಿ ಶುಕ್ರವಾರ ತಳ್ಳಿಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ತಿವಾರಿ, ಪ್ರಧಾನಿಯ ಭದ್ರತೆಯನ್ನು ಬೇರೆಯವರ ಭದ್ರತೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರ ಬೆಂಗಾವಲು ಪಡೆಯನ್ನು ಎಲ್ಲಿ ನಿಲ್ಲಿಸಲಾಗಿದೆ, ಅದು ಭಾರತ-ಪಾಕ್ ಗಡಿಯಿಂದ ಕೇವಲ 10 ಕಿಮೀ ದೂರದಲ್ಲಿದೆ. ಸಾಮಾನ್ಯವಾಗಿ ಗಡಿಯಲ್ಲಿ ಭಾರೀ ಫಿರಂಗಿಗಳನ್ನು ಪಾಕಿಸ್ತಾನ ನಿಯೋಜಿಸುತ್ತದೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಪ್ರಧಾನಿ ಮೋದಿಯವರು ಪಾಕಿಸ್ತಾನದ ಗುಂಡಿನ ದಾಳಿಯ ವ್ಯಾಪ್ತಿಯಲ್ಲಿದ್ದರು ಎಂದು ಹೇಳಿದ ಅವರು “ನಮ್ಮ ಬಂದೂಕುಗಳು ಗಡಿಯಲ್ಲಿಯೂ ನಿಂತಿವೆ, ಫಿರಂಗಿಗಳ ವ್ಯಾಪ್ತಿಯು 35-36 ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚು. ಹಾಗಾಗಿ, ದೇಶದ ಪ್ರಧಾನಿ ಭದ್ರೆತಯನ್ನು ಬೇರೆಯವರ ಭದ್ರತೆಗೆ ಹೋಲಿಸುವುದು ನನ್ನ ಆತ್ಮಸಾಕ್ಷಿಗೆ ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
ಆದರೆ, ಪ್ರಧಾನಿಯವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಪ್ರತಿಪಾದಿಸಿದ ಅವರು, ಪ್ರತಿಭಟನೆ ನಡೆಯುತ್ತಿರುವುದರಿಂದ ಅವರನ್ನು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ನಿಲ್ಲಿಸಲಾಯಿತು ಎಂದು ಹೇಳಿದರು.
ಫಿರೋಜ್‌ಪುರದಲ್ಲಿ ಪ್ರಧಾನಿ ಮೋದಿಯವರ ಭದ್ರತೆಗೆ ಬೆದರಿಕೆ ಇದೆ ಎಂಬ ಹೇಳಿಕೆಯನ್ನು ಪಂಜಾಬ್ ಮುಖ್ಯಮಂತ್ರಿ ಚನ್ನಿ ತಿರಸ್ಕರಿಸಿದ ಒಂದು ದಿನದ ನಂತರ ಅವರದ್ದೇ ಪಕ್ಷದ ನಾಯಕ ತಿವಾರಿ ಅವರ ಪ್ರತಿಕ್ರಿಯೆ ಬಂದಿದೆ.
ಪ್ರತಿಭಟನಾಕಾರರ ಗುಂಪೊಂದು ವಿಮಾನ ನಿಲ್ದಾಣದಿಂದ ಪ್ರಧಾನಿಯವರ ಬೆಂಗಾವಲು ಪಡೆಯ ಮಾರ್ಗವನ್ನು ತಡೆದ ನಂತರ ಪ್ರಧಾನಿ ಮೋದಿ ಬುಧವಾರ ತಮ್ಮ ಪಂಜಾಬ್ ಭೇಟಿಯನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು.
ಪ್ರಧಾನಿಗೆ ದೈಹಿಕವಾಗಿ ಹಾನಿ ಮಾಡಲು ಕಾಂಗ್ರೆಸ್ ಸಂಚು ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಪಂಜಾಬ್ ಸರ್ಕಾರ ಹೇಳಿದೆ, ಆದರೆ ತನಿಖೆಗೆ ಆದೇಶಿಸಿದೆ.
ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವಾಲಯವೂ ತನಿಖೆ ಆರಂಭಿಸಿದೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement