ಮಾರ್ಚ್‌ 15ರಿಂದ 23ರ ವರೆಗೆ ಸುಪ್ರಸಿದ್ಧ ಶಿರಸಿ ಮಾರಿಕಾಂಬಾದೇವಿ ಜಾತ್ರೆ

ಶಿರಸಿ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀಮಾರಿಕಾಂಬಾ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ಈ ವರ್ಷ ಮಾ.೧೫ರಿಂದ ಮಾ.೨೩ರ ವರೆಗೆ ನಡೆಯಲಿದೆ.

ನಗರದ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾತ್ರಾ ಮುಹೂರ್ತ ಘೋಷಣಾ ಸಭೆಯಲ್ಲಿ ವಿದ್ವಾನ್ ರಾಮಕೃಷ್ಣ ಭಟ್ಟ ಕೆರೇಕೈ ಮುಹೂರ್ತ ಘೋಷಿಸಿದರು. ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ನಾಡಿನ ಮನೆತನದ ಪ್ರಮುಖ ಅಜಯ್ ನಾಡಿಗ್ ಅವರು ದೇವಿ ಸಾನಿಧ್ಯದಲ್ಲಿ ದೀಪ ಬೆಳಗಿಸಿದರು. ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.

ಜನೆವರಿ 26ರಂದು ಬೆಳಿಗ್ಗೆ ಶ್ರೀ ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, 22ರಂದು ಮಂಗಳವಾರಮೊದಲ ಹೊರಬೀಡು ಪೂರ್ವದಿಕ್ಕಿಗೆ ರಾತ್ರಿ 9.30ರನಂತರ ನಡೆಯಲಿದೆ. ಫೆ.25ರಂದು ಶುಕ್ರವಾರ ಎರಡನೇ ಹೊರಬೀಡು ಉತ್ತರ ದಿಕ್ಕಿಗೆ ರಾತ್ರಿ 9:30ರ ನಂತರ ನಡೆಯಲಿದೆ. ಮಾ.1ರಂದು ಮೂರನೇ ಹೊರಬೀಡು ರಾತ್ರಿ 9:30ರ ವರೆಗೆ ನಡೆಯಲಿದೆ, ಮಾ.4ರಂದು ಶುಕ್ರವಾರ ರಥದ ಬಗ್ಗೆ ವೃಕ್ಷ ಪೂಜೆ ನಡೆಯಲಿದೆ. ನಾಲ್ಕನೇ ಹೊರಬೀಡು ಉತ್ತರ ದಿಕ್ಕಿಗೆ 4ಮಾರ್ಚ್ ರಂದು ನಡೆಯಲಿದೆ. ಮಾರ್ಚ್ 8 ಮಂಗಳವಾರ ಶ್ರೀ ದೇವಿಯ ರಥದ ಮರ ತರುವ ಕಾರ್ಯ ನಡೆಯಲಿದೆ. 9ರಂದು ದೇವಿಯ ವಿಗ್ರಹ ವಿಸರ್ಜನೆ , 15ರಂದು ಶ್ರೀ ದೇವಿಯ ರಥದ ಕಲಶ ಪ್ರತಿಷ್ಠೆ ಆಗಲಿದೆ.
ಮಾರ್ಚ್‌ 15ರಂದು ಮಂಗಳವಾರ ರಾತ್ರಿ ಶ್ರೀದೇವಿ ಜಾತ್ರಾ ಕಲ್ಯಾಣ ಪ್ರತಿಷ್ಠೆ , ಮಾರ್ಚ್ 16ರಂದು ದೇವಿಯ ರಥಾರೋಹಣ ಹಾಗೂ ಬೆಳಿಗ್ಗೆ 8:36ರ ನಂತರ ದೇವಿಯ ಶೋಭಾಯಾತ್ರೆ ನಡೆಯಲಿದೆ.17ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವೆಗಳು ನಡೆಯಲಿದೆ. ಮಾರ್ಚ್‌ 23ರಂದು ಜಾತ್ರೆ ಸಂಪನ್ನಗೊಳ್ಳಲಿದೆ. ಏಪ್ರಿಲ್‌ 2ರಂದು ಯುಗಾದಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ ಎಂದು ಸಭೆಗೆ ತಿಳಿಸಲಾಯಿತು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ, ಡಿಎಸ್ಪಿ ರವಿ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಬಾಬುದಾರ ಪ್ರಮುಖರಾದ
ಅಜಯ ನಾಡಿಗ, ರಮೇಶ ದಬ್ಬೆ, ಮಂಜು ಕುರಬರ, ಬಸವರಾಜ ಚಕ್ರಸಾಲಿ ಇತರರಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement