ಕರ್ನಾಟಕದಲ್ಲಿ ಹೊಸದಾಗಿ 8,906 ಜನರಿಗೆ ಸೋಂಕು, ಬೆಂಗಳೂರಿನಲ್ಲೇ ಬಹುತೇಕ ಪ್ರಕರಣ ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಶನಿವಾರ ಹೊಸದಾಗಿ 8,906 ಕೊರೊನಾ ಸೋಂಕುಗಳು ದಾಖಲಾಗಿದ್ದು, 508 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದೇ ಸಮಯದಲ್ಲಿ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರಿಗೆ ಸಂಖ್ಯೆ 30,39,958ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 29,63,056 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.5.42ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ಶೇ.0.04 ಇದೆ.

ಬೆಂಗಳೂರಿನಲ್ಲಿ 7,113 ಹೊಸ ಪ್ರಕರಣಗಳು ಕಂಡು ಬಂದಿದ್ದು, ಮೂರು ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು 32 ಸಾವಿರ ಸಕ್ರಿಯ ಪ್ರಕರಣಗಳಿವೆ
ಕಳೆದ 24 ಗಂಟೆಯಲ್ಲಿ 1,64,261 ಜನರಿಗೆ ಕೊರೋನಾ ಪಾಸಿಟಿವ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಜಿಲ್ಲಾವಾರು ಸೋಂಕಿನ ಮಾಹಿತಿ…
ಬಾಗಲಕೋಟೆ -6, ಬಳ್ಳಾರಿ -43, ಬೆಳಗಾವಿ -70, ಬೆಂಗಳೂರು ಗ್ರಾಮಾಂತರ -111, ಬೆಂಗಳೂರು ನಗರ -7,113, ಬೀದರ್ -13, ಚಾಮರಾಜನಗರ -10, ಚಿಕ್ಕಬಳ್ಳಾಪುರ -36, ಚಿಕ್ಕಮಗಳೂರು -22, ಚಿತ್ರದುರ್ಗ -15, ದಕ್ಷಿಣ ಕನ್ನಡ -295, ದಾವಣಗೆರೆ -12, ಧಾರವಾಡ -56, ಗದಗ -16, ಹಾಸನ -139, ಹಾವೇರಿ -0, ಕಲಬುರಗಿ -58, ಕೊಡಗು -26, ಕೋಲಾರ -65, ಕೊಪ್ಪಳ -3, ಮಂಡ್ಯ -183, ಮೈಸೂರು -203, ರಾಯಚೂರು -4, ರಾಮನಗರ -28, ಶಿವಮೊಗ್ಗ-66, ತುಮಕೂರು -53, ಉಡುಪಿ -186, ಉತ್ತರ ಕನ್ನಡ -52, ವಿಜಯಪುರ -22 ಮತ್ತು ಯಾದಗಿರಿಯಲ್ಲಿ -0 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಗುಂಡ್ಲುಪೇಟೆ | ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಶವಗಳು ಪತ್ತೆ, ವಿಷಪ್ರಾಶನದ ಶಂಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement