ಹುಣಸೂರು: ಎಷ್ಟೇ ಪ್ರಯತ್ನ ಪಟ್ರೂ ನಾಲೆ ಏರಲಾಗದೆ ಕಾಡಾನೆಗಳು ಸುಸ್ತೋ ಸುಸ್ತು…! ವೀಕ್ಷಿಸಿ

ಹುಣಸೂರು: ಆಹಾರ ಅರಸಿ ದಿಕ್ಕುತಪ್ಪಿ ಗ್ರಾಮಕ್ಕೆ ಬಂದಿದ್ದ ಆನೆಗಳು ಜನರ ಗದ್ದಲಕ್ಕೆ ಹೆದರಿ ನಾಲೆಗೆ ಬಿದ್ದು ಪರದಾಡಿದ ಘಟನೆ ನಾಗರಹೊಳೆ ಸಮೀಪದ ಹುಣಸೂರಿನಲ್ಲಿ ನಡೆದಿದೆ.
ನಾಗರಹೊಳೆ ಅಭಯಾರಣ್ಯದಿಂದ ಕಾಡಾನೆಗಳು ದಿಕ್ಕುತಪ್ಪಿ ಬಂದಿದ್ದ ಆನೆಗಳು ಜನರ ಚೀರಾಟ ಮತ್ತು ಕಲ್ಲೇಟಿಗೆ ಬೆದರಿ ನಾಲೆಗೆ ಇಳಿದಿವೆ. ಆದರೆ ನಾಲೆಯಿಂದ ಮೇಲೆ ಹತ್ತಲಾಗದೆ ಅತ್ತಿಂದಿತ್ತ ಓಡಾಡಿದ ಸುಸ್ತು ಹೊಡೆದಿವೆ. ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾಗರಹೊಳೆ ಉದ್ಯಾನವನದಿಂದ ಭಾನುವಾರ ರಾತ್ರಿ ಹೊರಬಂದಿದ್ದ ಆನೆಗಳ ಹಿಂಡು ಪೆಂಜಹಳ್ಳಿ, ಗುರುಪುರ, ಮಾಜಿ ಗುರುಪುರ ಗ್ರಾಮಗಳ ಜಮೀನುಗಳಿಗೆ ಬಂದಿವೆ. ರಾತ್ರಿ ವೇಳೆ ಮೇವು ತಿಂದು ಮುಂಜಾನೆ ಕಾಡಿನತ್ತ ತೆರಳುತ್ತಿದ್ದ ವೇಳೆ ರೈತರು ಆನೆಗಳನ್ನು ಓಡಿಸಿದ್ದಾರೆ. ಈ ವೇಳೆ ದಿಕ್ಕು ತಪ್ಪಿದ ಆನೆಗಳು ನಾಲೆಗೆ ಇಳಿದಿವೆ.

ಅನಂತರವೂ ಜನರು ನಾಲೆ ಸುತ್ತ ಜಮಾಯಿಸಿ, ಕೂಗಾಡಿ, ಕಲ್ಲು ಬೀಸಿ ಆನೆಗಳನ್ನು ಬೆದರಿಸಿದ್ದಾರೆ. ಇದರಿಂದ ಮತ್ತೆ ಬೆದರಿದ ಆನೆಗಳು ನಾಲೆ ಮೇಲೆ ಬರಲು ಪ್ರಯತ್ನ ಪಟ್ಟವು. ಆದರೆ ಅವುಗಳಿಗೆ ಮೇಲೆ ಹತ್ತಲು ಸಾಧ್ಯವಾಗಲಿಲ್ಲ. ಹೀಗಾಗಿ ಗಂಟೆಗಳ ಕಾಲ ಅತ್ತಿಂದಿತ್ತ ಓಡಾಡಿದವು. ಅನಂತರ ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರನ್ನು ನಿಯಂತ್ರಿಸಿ ಆನೆಗಳು ನಾಲೆಯಿಂದ ಮೇಲೆ ಬರಲು ಸಹಾಯ ಮಾಡಿದ್ದಾರೆ. ನಂತರ ಪೆಂಜಹಳ್ಳಿ ಭಾಗದಿಂದ ಉದ್ಯಾನವನದತ್ತ ತೆರಳಿವೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement