ರಾಜ್ಯಾದ್ಯಂತ ಜ.31ರ ವರೆಗೆ ರಾತ್ರಿ ಕರ್ಫ್ಯೂ- ವಾರಾಂತ್ಯದ ಕರ್ಫ್ಯೂ ವಿಸ್ತರಣೆ: ಕೋವಿಡ್‌ ಮಾರ್ಗಸೂಚಿ ವಿಸ್ತರಿಸಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ಜಾರಿಗೊಳಿಸಿರುವಂತ ಕೊರೊನಾ ಮಾರ್ಗಸೂಚಿಗಳು ಹಾಗೂ ವಾರಾಂತ್ಯದ ಕರ್ಫ್ಯೂವನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ.
ಈ ಕುರಿತು ಪರಿಷ್ಕೃತ ವಿಸ್ತರಣಾ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಅವರು, ದಿನಾಂಕ 04-01-2022ರ ಮಾರ್ಗಸೂಚಿಗಳನ್ನು ದಿನಾಂಕ 31-01-2022ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ನೂತನ ಪರಿಷ್ಕೃತ ಕೊರೋನಾ ಮಾರ್ಗಸೂಚಿಯಂತೆ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳ ಶಾಲಾ-ಕಾಲೇಜು ಸ್ಥಗಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಯಾವುದೇ ಪ್ರತಿಭಟನೆ, ಧರಣಿ, ಸಮಾವೇಶಗಳಿಗೆ ಅನುಮತಿ ನಿಷೇಧ ಮುಂದುವರಿಸಲಾಗಿದೆ. ಆದರೆ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಿ ಮದುವೆಗಳನ್ನು ನಡೆಸಲು ಅನುಮತಿಸಲಾಗಿದೆ. ಹೊರಾಂಗಣದಲ್ಲಿ 200 ಜನರೊಂದಿಗೆ, ಒಳಾಂಗಣದಲ್ಲಿ 100 ಜನರ ಮಿತಿಯೊಂದಿಗೆ ವಿವಾಹಗಳಿಗೆ ಅವಕಾಶ ನೀಡಲಾಗಿದೆ.
ಮೆಟ್ರೋ ರೈಲು ಸಂಚಾರ, ಸಾರ್ವಜನಿಕ ಸಾರಿಗೆಗಳಿಗೆ ಅವಕಾಶ ನೀಡಿಕೆ ಮುಂದುವರೆಸಲಾಗಿದೆ. ಗಡಿ ಭಾಗದಲ್ಲಿ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ತಿಳಿಸಿಲಾಗಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement