ವಿಧಾನಸಭೆ ಚುನಾವಣೆ- 2022: ಟೈಮ್ಸ್ ನೌ ಚುನಾವಣಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಉತ್ತರಾಖಂಡದಲ್ಲಿ ಗೆಲ್ಲುವ ಕುದುರೆ ಯಾರು..?

ನವದೆಹಲಿ: ಉತ್ತರಾಖಂಡದ ವಿಧಾನಸಭೆ ಚುನಾವಣೆ ಫೆಬ್ರವರಿ 14, 2022 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಟೈಮ್ಸ್ ನೌ ಒಪಿನಿಯನ್ ಪೋಲ್ ಸಮೀಕ್ಷೆಯು 2022 ರ ಉತ್ತರಾಖಂಡ್ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ.
ಉತ್ತರಾಖಂಡ ರಾಜ್ಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಸಮೀಕ್ಷೆಯ ಪ್ರಕಾರ, ಮುಂಬರುವ ಉತ್ತರಾಖಂಡ್ 2022 ರ ಚುನಾವಣೆಯಲ್ಲಿ ‘ಡಬಲ್ ಇಂಜಿನ್ ಸರ್ಕಾರ್’ ಅಂಶವು ಬಿಜೆಪಿ ಪರವಾಗಿ ಕೆಲಸ ಮಾಡುತ್ತದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ 49 ಪ್ರತಿಶತದಷ್ಟು ಜನರು ಹೇಳಿದ್ದಾರೆ.

ಪ್ರಸ್ತುತ ಪುಷ್ಕರ್ ಸಿಂಗ್ ಧಾಮಿ ಗುಡ್ಡದ ರಾಜ್ಯದಲ್ಲಿ ಹೆಚ್ಚು ಆದ್ಯತೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಟೈಮ್ಸ್ ನೌ ಒಪಿನಿಯನ್ ಪೋಲ್ ಸಮೀಕ್ಷೆಯ ಪ್ರಕಾರ, ಉತ್ತರಾಖಂಡದಲ್ಲಿ 42.34% ಜನರು ಪ್ರಸ್ತುತ ಮುಖ್ಯಮಂತ್ರಿ ಪರವಾಗಿ ಒಲವು ತೋರಿದ್ದರಿಂದ ಪುಷ್ಕರ್ ಸಿಂಗ್ ಧಾಮಿ ಅತ್ಯಂತ ಆದ್ಯತೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನ ಹರೀಶ್ ಸಿಂಗ್ ರಾವತ್ 23.89%ದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸಮೀಕ್ಷೆಯ 14.55 % ಪ್ರತಿಸ್ಪಂದಕರು ಮಾತ್ರ ಎಎಪಿಯ ಕರ್ನಲ್ ಅಜಯ್ ಕೊಥಿಯಾಲ್ (ನಿವೃತ್ತ) ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದಾರೆ.
ಉತ್ತರಾಖಂಡ್ ಚುನಾವಣೆ 2022 ರಲ್ಲಿ, ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ ಮತ್ತು ಹಣದುಬ್ಬರವು ಪ್ರಮುಖ ಚುನಾವಣಾ ಸಮಸ್ಯೆಗಳಾಗಿವೆ.
ಟೈಮ್ಸ್ ನೌ ಒಪಿನಿಯನ್ ಪೋಲ್ ಸಮೀಕ್ಷೆಯು 2022 ರ ಉತ್ತರಾಖಾಡ್ ಚುನಾವಣೆಯಲ್ಲಿ ಬಿಜೆಪಿಸುಮಾರು 44-50 ಸ್ಥಾನಗಳನ್ನು ಗೆಲ್ಲಲಿದೆ ಹಾಗೂ ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ, ಕಾಂಗ್ರೆಸ್ 12-15 ಮತ್ತು ಎಎಪಿ 5-8 ಸ್ಥಾನಗಳನ್ನು ಗಳಿಸಲಿದೆ ಎಂದು ಅದು ಹೇಳಿದೆ.
ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಡಬಲ್ ಎಂಜಿನ್ ಸರ್ಕಾರ್ ಅಂಶ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮತ್ತೆ ಅಧಿಕಾರಕ್ಕೆ ಬರಲು ಸಹಾಯ ಮಾಡುತ್ತದೆ ಎಂದು ಸಮೀಕ್ಷೆ ಹೇಳಿದೆ.

ಪ್ರಮುಖ ಸುದ್ದಿ :-   ಒಂದೇ ಕಡೆ ಒಟ್ಟುಗೂಡಿದ 150 ಜೋಡಿ ಅವಳಿ-ತ್ರಿವಳಿಗಳು...!

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement