ಕಾಡಿನ ಮಧ್ಯೆ ಚಾಲಕನಿಗೆ ಪ್ರಜ್ಞೆ ತಪ್ಪಿ ಬಸ್‌ ನಿಂತಾಗ 10 ಕಿಮೀ ಬಸ್ ಚಲಾಯಿಸಿ ಚಾಲಕನ ಆಸ್ಪತ್ರೆಗೆ ದಾಖಲಿಸಿದ ಮಹಿಳೆ..! ದೃಶ್ಯ ವಿಡಿಯೊದಲ್ಲಿ ಸೆರೆ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಪ್ರಜ್ಞೆ ತಪ್ಪಿದಾಗ ನಂತರ 42 ವರ್ಷದ ಮಹಿಳೆಯೊಬ್ಬರು ಮಿನಿ ಬಸ್ ಅನ್ನು ನಿಯಂತ್ರಿಸಿ ಮಹಿಳೆಯರು ಮತ್ತು ಮಕ್ಕಳನ್ನು ಕರೆದೊಯ್ಯುವ ಮೂಲಕ ಸಮಯ ಪ್ರಜ್ಞೆ ಹಾಗೂ ಸಾಹಸ ತೋರಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಜನವರಿ 7 ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೋಗಿತಾ ಸತವ್ ಎಂಬ ಮಹಿಳೆ ಪುಣೆ ಸಮೀಪದ ಶಿರೂರಿನಲ್ಲಿರುವ ಕೃಷಿ ಪ್ರವಾಸೋದ್ಯಮ ಕೇಂದ್ರದಲ್ಲಿ ಪಿಕ್ನಿಕ್ ಮುಗಿಸಿ ಇತರ ಮಹಿಳೆಯರು ಮತ್ತು ಮಕ್ಕಳೊಂದಿಗೆ ಮಿನಿ ಬಸ್ಸಿನಲ್ಲಿ ವಾಪಸ್‌ ಆಗುತ್ತಿದ್ದರು.
ಆಗ ಏಕಾಏಕಿ ಚಾಲಕ ಫಿಟ್ಸ್‌ ಲಕ್ಷಣಗಳನ್ನು ತೋರಿಸಿದ್ದಾನೆ ಮತ್ತು ನಿರ್ಜನ ರಸ್ತೆಯ ಮಧ್ಯದಲ್ಲಿ ವಾಹನವನ್ನು ನಿಲ್ಲಿಸಿದ್ದಾನೆ. ಇದನ್ನು ನೋಡಿ ಬಸ್ಸಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿ ಅಳಲು ಪ್ರಾರಂಭಿಸಿದ್ದಾರೆ. ಆಗ ಬಸ್ಸಿನಲ್ಲಿಯೇ ಇದ್ದ ಮಹಿಳೆಯೊಬ್ಬರು, ವಾಹನವನ್ನು ಚಾಲನೆ ಮಾಡಲು ಮುಂದಾದರು ಮತ್ತು ಚಾಲಕನನ್ನು ಆಸ್ಪತ್ರೆಗೆ ಸಾಗಿಸಿದರು.

ನನಗೆ ಕಾರನ್ನು ಓಡಿಸುವುದು ಹೇಗೆಂದು ತಿಳಿದಿತ್ತು. ಆದರೆ ದೊಡ್ಡ ವಾಹನ ಓಡಿಸಿರಲಿಲ್ಲ. ಆದರೂ ಪರಿಸ್ಥಿತಿಗೆ ಅನುಗುಣವಾಗಿ ನಾನು ಬಸ್‌ ಚಾಲನೆ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಧರಿಸಿದೆ. ಯಾಕೆಂದರೆ ಚಾಲಕನಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವುದು ಆದ್ಯತೆಯಾಗಿತ್ತು. ಆದ್ದರಿಂದ, ನಾನು ಹತ್ತಿರದ ಆಸ್ಪತ್ರೆಗೆ ಮಿನಿ ಬಸ್‌ ಓಡಿಸಿ ಚಾಲಕನನ್ನು ಆಸ್ಪತ್ರೆಗೆ ಸೇರಿಸಿದೆ ಎಂದು ಸತವ್ ಹೇಳಿದರು.
10 ಕಿ.ಮೀ ಓಡಿಸಿದ ಮಿನಿ ಬಸ್‌ ಓಡಿಸಿದ ಮಹಿಳೆ ಇತರ ಪ್ರಯಾಣಿಕರನ್ನೂ ಮನೆಗೆ ಕರೆದೊಯ್ದಿದ್ದಾಳೆ. ಸತವ್ ಬಿಕ್ಕಟ್ಟಿನ ಸಂದರ್ಭದಲ್ಲಿ ಧೈರ್ಯ ತೋರಿದ ಮತ್ತು ಗಾಬರಿಯಾಗದೆ ಬಸ್‌ ಓಡಿಸಿದ್ದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement