ಕಾಲರ್‌ವಾಲಿ ಖ್ಯಾತಿಯ 29 ಮರಿಗಳಿಗೆ ಜನ್ಮ ನೀಡಿದ್ದ ಮಧ್ಯಪ್ರದೇಶದ ಹುಲಿ 17ನೇ ವಯಸ್ಸಿನಲ್ಲಿ ನಿಧನ

ಸಿಯೋನಿ: 29 ಮರಿಗಳಿಗೆ ಜನ್ಮ ನೀಡಿ ಸೂಪರ್‌ ಮಾಮ್ ಎಂಬ ಟ್ಯಾಗ್ ಗಳಿಸಿದ್ದ ಮಧ್ಯಪ್ರದೇಶದ ಪೆಂಚ್ ಟೈಗರ್ ರಿಸರ್ವ್‌ನ (ಪಿಟಿಆರ್) ಪ್ರಸಿದ್ಧ ಹುಲಿ ‘ಕಾಲರ್‌ ವಾಲಿ’ ಮೃತಪಪ್ಪಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
17 ವರ್ಷದ ಹುಲಿ ಶನಿವಾರ ಸಂಜೆ ಮೃತಪಟ್ಟಿದೆ. 2008 ಮತ್ತು 2018 ರ ನಡುವೆ 11 ವರ್ಷಗಳ ಅವಧಿಯಲ್ಲಿ ಇದು 29 ಮರಿಗಳಿಗೆ ಜನ್ಮ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಯಸ್ಸಾದ ಕಾರಣ ತುಂಬಾ ದುರ್ಬಲವಾಗಿ ಕಾಣುತ್ತಿದ್ದ ಹುಲಿಯನ್ನು ಕೊನೆಯದಾಗಿ ಜನವರಿ 14 ರಂದು ಪಿಟಿಆರ್ ಸಂದರ್ಶಕರು ನೋಡಿದ್ದಾರೆ. ತಜ್ಞರ ಪ್ರಕಾರ, ಹುಲಿಯ ಸರಾಸರಿ ವಯಸ್ಸು ಸುಮಾರು 12 ವರ್ಷಗಳು.
ಈ ಹೆಣ್ಣು ಮರಿಗೆ ಮಾರ್ಚ್ 2008 ರಲ್ಲಿ ರೇಡಿಯೋ ಕಾಲರ್ ಮಾಡಲಾಗಿತ್ತು. ಆ ರೇಡಿಯೋ ಕಾಲರ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ, ಜನವರಿ 2010 ರಲ್ಲಿ ಮತ್ತೆ ರೇಡಿಯೋ ಕಾಲರ್ ಮಾಡಲಾಗಿತ್ತು. ನಂತರ ಹುಲಿಯು “ಕಾಲರ್‌ ವಾಲಿ” ಅಥವಾ T15 ಟೈಗ್ರೆಸ್ ಎಂದು ಪ್ರಸಿದ್ಧವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 2008ರಲ್ಲಿ ಕಾಲರ್‌ ವಾಲಿ ಮೊದಲು ಮೂರು ಮರಿಗಳಿಗೆ ಜನ್ಮ ನೀಡಿತ್ತು, ಆದರೆ ದುರದೃಷ್ಟವಶಾತ್ ಅವು ಬದುಕುಳಿಯಲಿಲ್ಲ. ಕೊನೆಯ ಬಾರಿಗೆ, ಹುಲಿ ಡಿಸೆಂಬರ್ 2018 ರಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತು, ಇದು 29 ಮರಿಗಳನ್ನು ಹಾಕಿದೆ. ಈ ಸಂಖ್ಯೆಯು ದಾಖಲೆಯಾಗಿರಬಹುದು ಎಂದು ಅಧಿಕಾರಿಗಳು ಭಾವಿಸುತ್ತಾರೆ . ಒಟ್ಟು 29 ಮರಿಗಳಲ್ಲಿ 25 ಬದುಕುಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರೂಪದ ಘಟನೆಯಲ್ಲಿ, ಸೆಪ್ಟೆಂಬರ್, 2005 ರಲ್ಲಿ ಪ್ರಸಿದ್ಧ ಹುಲಿ T-7 ಗೆ ನಾಲ್ಕು ಮರಿಗಳಲ್ಲಿ ಒಂದಾಗಿ ಜನಿಸಿದ ಕಾಲರ್ವಾಲಿ, ಅಕ್ಟೋಬರ್ 23, 2010 ರಂದು ಐದು ಮರಿಗಳಿಗೆ (ನಾಲ್ಕು ಹೆಣ್ಣು ಮತ್ತು ಒಂದು ಗಂಡು) ಜನ್ಮ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. . 526 ಸಂಖ್ಯೆಗಳೊಂದಿಗೆ ಮಧ್ಯಪ್ರದೇಶವು 2018 ರಲ್ಲಿ ದೇಶದ “ಹುಲಿ ರಾಜ್ಯ” ವಾಗಿ ಹೊರಹೊಮ್ಮಿತ್ತು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ : ಬ್ರಹ್ಮೋಸ್ ಕ್ಷಿಪಣಿ ಬಳಸಿ ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಮಾಡಿದ ಭಾರತ; ಪಟ್ಟಿ ಇಲ್ಲಿದೆ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement