ಕೊರೊನಾ ವೈರಸ್ಸಿಗೆ ಶೀಘ್ರವೇ ಅಂತ್ಯ ಬರಲಿದೆ: ವೈರಾಲಜಿಸ್ಟ್‌ ಡಾ.ಕುತುಬ್ ಮಹಮೂದ್

ನವದೆಹಲಿ: : ಲಸಿಕೆಯು ಕೊರೊನಾ ವಿರುದ್ಧ ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಈ ಸಾಂಕ್ರಾಮಿಕ ರೋಗವು ಇನ್ನು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು  ವಾಷಿಂಗ್ಟನ್​ನ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್ ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಸುದ್ದಿಸಂಸ್ಥೆ ಜೊತೆ ಅವರು ಮಾತನಾಡಿ, ಕೊರೊನಾದ ಅಂತ್ಯ ಬಹಳ ಹತ್ತಿರದಲ್ಲಿದೆ ಎಂದು ಅವರು ಹೇಳಿದ್ದಾರೆ. ಭಾರತವು ಲಸಿಕಾ ಅಭಿಯಾನ ಆರಂಭಿಸಿ ಒಂದು ವರ್ಷ ಕಳೆದಿದ್ದು, 156 ಕೋಟಿ ಡೋಸ್ ಲಸಿಕೆ ನೀಡುವುದರ ಮೂಲಕ ಮೈಲಿಗಲ್ಲನ್ನು ತಲುಪಿದೆ. ಇದರ ಬೆನ್ನಲ್ಲೇ ಕುತುಬ್ ಮಹಮೂದ್ ಅವರ ಹೇಳಿಕೆ ನೀಡಿದ್ದು, ಮಹತ್ವ ಪಡೆದಿದೆ.
ಈ ಸಾಂಕ್ರಾಮಿಕ ಶಾಶ್ವತವಾಗಿ ಮುಂದುವರೆಯುವುದಿಲ್ಲ. ಮತ್ತು ಅದು ಶೀಘ್ರವೇ ಕೊನೆಯಾಗಲಿದೆ. ಇದು ಚೆಸ್ ಆಟದಂತೆ, ಆದರೆ ಇಲ್ಲಿ ಯಾರೂ ಗೆಲ್ಲುವುದಿಲ್ಲ. ಪಂದ್ಯ ಡ್ರಾ ಆಗುತ್ತದೆ, ಅಂದರೆ ವೈರಸ್ ಅಡಗಿಕೊಳ್ಳಲಿದೆ. ಪರೋಕ್ಷವಾಗಿ ನಾವು ಜಯ ಸಾಧಿಸಲಿದ್ದೇವೆ. ಶೀಘ್ರದಲ್ಲೇ ಮಾಸ್ಕ್ ಇಲ್ಲದೇ ಓಡಾಡುವ ದಿನಗಳು ಬರಲಿವೆ ಎಂದು ನಾನು ಭಾವಿಸುತ್ತೇನೆ ಎಂದು ಕುತುಬ್ ಮಹಮೂದ್ ಹೇಳಿದ್ದಾರೆ.
ವೈರಸ್ ಯಾವಾಗಲೂ ರೂಪಾಂತರಗಳನ್ನು ಹೊಂದಿ ಹೆಚ್ಚು ಪ್ರಸರಣವಾಗಲು ನೋಡುತ್ತದೆ. ಈ ಮೂಲಕ ಶಾಶ್ವತವಾಗಿ ಇರಲು ಅದು ಪ್ರಯತ್ನಿಸುತ್ತದೆ. ಆದ್ದರಿಂದ ಇದು ಮನುಷ್ಯ ಹಾಗೂ ವೈರಸ್ ನಡುವಿನ ಚೆಸ್ ಆಟದಂತೆ. ಇದರಲ್ಲಿ ಮನುಷ್ಯನ ಚತುರ ನಡೆಗಳೆಂದರೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ. ವೈರಸ್ ವಿರುದ್ಧ ದೊಡ್ಡ ಅಸ್ತ್ರವೆಂದರೆ ಲಸಿಕೆ, ರೋಗನಿರೋಧಕ ಪ್ರತಿಕಾಯಗಳು ಎಂದು ಅವರು ವಿವರಿಸಿದ್ದಾರೆ.
ಭಾರತವು ವರ್ಷದೊಳಗೆ ಶೇ.60 ರಷ್ಟು ಲಸಿಕೆ ಡೋಸ್‌ ನೀಡಿದ್ದಕ್ಕೆ ಡಾ.ಕುತುಬ್ ಅಭಿನಂದಿಸಿದ್ದಾರೆ. ‘‘ಇದು ಭಾರತದಲ್ಲಿನ ಲಸಿಕೆ ತಯಾರಕರ ದೊಡ್ಡ ಸಾಧನೆಯಾಗಿದೆ. ಭಾರತೀಯ ಲಸಿಕೆಗಳನ್ನು ಜಾಗತಿಕವಾಗಿ ಬಳಸಲಾಗುತ್ತದೆ. 12 ತಿಂಗಳುಗಳಲ್ಲಿ ಭಾರತ 60 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಸಾಧಿಸಿದೆ. ಇದು ಭಾರತ ಸರ್ಕಾರ, ಆರೋಗ್ಯ ಸಚಿವಾಲಯ ಮತ್ತು ಲಸಿಕೆ ತಯಾರಕರ ಒಂದು ದೊಡ್ಡ ಸಾಧನೆಯಾಗಿದೆ ಎಂದು ವೈರಾಲಜಿಸ್ಟ್ ಡಾ.ಕುತುಬ್ ಪ್ರಶಂಸಿದಿದ್ದಾರೆ.
ಕೊರೊನಾ ರೂಪಾಂತರ ಹೊಂದುವುದರಲ್ಲಿ ಆಶ್ಚರ್ಯವಿಲ್ಲ. ಲಸಿಕೆಯ ಮುಖಾಂತರ ಎದುರಿಸಲು ಸಾಧ್ಯವಾಗುತ್ತದೆ. ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ರೂಪಾಂತರವಲ್ಲದ ಮೂಲ ಸೋಂಕು ಮತ್ತೆ ಹರಡುತ್ತಿರುವ ಕುರಿತು ಉತ್ತರಿಸಿರುವ ಕುತುಬ್ ಅದನ್ನು ಬೂಸ್ಟರ್​ ಡೋಸ್​ನಿಂದ ಎದುರಿಸಬಹುದು ಎಂದು ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್​ನ ಬೂಸ್ಟರ್ ಡೋಸ್ ಓಮಿಕ್ರಾನ್ ವಿರುದ್ಧ 90%ರಷ್ಟು ಪರಿಣಾಮಕಾರಿ ಎಂದು ಡಾ.ಕುತುಬ್ ಹೇಳಿದ್ದಾರೆ. ಅಲ್ಲದೇ ಅದು ತಯಾರಿಸಿರುವ ಮಕ್ಕಳ ಲಸಿಕೆ ಎರಡು ವರ್ಷದ ಮಕ್ಕಳಲ್ಲೂ ಪರಿಣಾಮಕಾರಿ ಎಂದು ಹೇಳಿದ್ದಾರೆ.​ ಕೊವ್ಯಾಕ್ಸಿನ್ ಪರಿಣಾಮಕಾರಿ ಲಸಿಕೆ ತಯಾರಿಸುತ್ತಿದ್ದು, ಭಾರತದಿಂದ ಭಾರತದಲ್ಲೇ ತಯಾರಿಸಲಾಗಿದೆ ಎಂದು ಡಾ.ಕುತುಬ್ ಪ್ರಶಂಸಿಸಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement