ಮುರ್ಡೇಶ್ವರದ ಸಾರ್ವಜನಿಕ ಮಹಾರಥೋತ್ಸವ ಇಲ್ಲ: ಒಳಾಂಗಣ ಪೂಜೆಗಷ್ಟೇ ಸೀಮಿತ

ಭಟ್ಕಳ: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನೆವರಿ 20 ರಂದು ನಡೆಯಲಿರುವ ಮುರ್ಡೇಶ್ವರದ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದ ಕೋವಿಡ್ ನಿಯಮಗಳ ಪ್ರಕಾರ ಅನುಮತಿ ನೀಡಿಲ್ಲ.ಜಾತ್ರೆ ಕೇವಲ ದೇವಾಲಯದ ಒಳಾಂಗಣದ ಪೂಜೆ ಪುರಸ್ಕಾರಗಳಿಗೆ ಮಾತ್ರ ಸೀಮಿತವಾಗಿರಲಿದೆ ಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ತಿಳಿಸಿದ್ದಾರೆ.

ಹೀಗಾಗಿ ಸಾರ್ವಜನಿಕರು ಮತ್ತು ಭಕ್ತಾರು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮುರ್ಡೇಶ್ವರ ಜಾತ್ರೆಗೆ ಸಂಬಂದಿತ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಜಾತ್ರೆಯಲ್ಲಿ ಯಾವುದೇ ವಿಜೃಂಭಣೆಗೆ ಅವಕಾಶ ಇಲ್ಲ, ದೇವಾಲಯದ ಹೊರಾಂಗಣದಲ್ಲಿ ಯಾವುದೇ ರೀತಿಯ ಉತ್ಸವ, ಮೆರವಣಿಗೆ, ಮನರಂಜನಾ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ, ಹಾಗೂ ಹೆಚ್ಚುವರಿ ಅಂಗಡಿ ಮಳಿಗೆಗಳನ್ನು ತೆರೆಯಲು ಸಹ ಅವಕಾಶ ಇಲ್ಲ ಎಂದು ಹೇಳಿದರು.
ಜಾತ್ರೆ ಸಂದರ್ಭದಲ್ಲಿ ಮುರ್ಡೇಶ್ವರದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸಹಾಯಕ ಆಯುಕ್ತೆ ಮಮತಾ ದೇವಿ ಅವರು ಸೂಚನೆ ನೀಡಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement