ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಹೋಮ

ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ಹಾಗೂದೀರ್ಘಾಯುಷ್ಯಕ್ಕೆ ಪ್ರಾರ್ಥಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯಿತು.

ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಈ ಯಾಗ ನಡೆಯುತ್ತಿದೆ. ವೇದಮೂರ್ತಿ ನಾಗೇಂದ್ರ ಭಾರದ್ವಾಜ ಸುರತ್ಕಲ್ ಪ್ರಧಾನ ಪೌರೋಹಿತ್ಯದಲ್ಲಿ ಶೃಂಗೇರಿ, ಬೆಂಗಳೂರು, ಕಾಸರಗೋಡು, ಮೈಸೂರು ಸಹಿತ ನಾನಾ ಕಡೆಗಳ 7 ಆಚಾರ್ಯರ ಸಹಿತ 130 ಮಂದಿ ಋತ್ವಿಜರಿಂದ 1008 ಆಹುತಿಗಳ ಮಹಾ ಮೃತ್ಯುಂಜಯ ಹೋಮ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಚತುರ್ವೇದ ಪಾರಾಯಣ ಆರಂಭವಾಗಿದ್ದು, ಗೋ ಪೂಜೆ, ಗಣಪತಿ ಹೋಮ ಬಳಿಕ 11 ಗಂಟೆ ಸುಮಾರಿಗೆ ಮಹಾ ಮೃತ್ಯುಂಜಯ ಹೋಮ ನಡೆದಿದೆ.
ಇತ್ತೀಚೆಗೆ ಪ್ರಧಾನಿ ಮೋದಿ ಪಂಜಾಬ್ ಗೆ ಬಿಜೆಪಿ ಸಮಾವೇಶದ ಹಿನ್ನೆಲೆ ತೆರಳಿದಾಗ ಭಾರೀ ಭದ್ರತಾ ಲೋಪ ನಡೆದಿತ್ತು. ಹುಸೇನಿವಾಲಾ ಬಳಿಯ ಫ್ಲೈಓವರ್ ನಲ್ಲಿ ಪ್ರಧಾನಿ ಮೋದಿ 15-20 ನಿಮಿಷಗಳ ಕಾಲ ಸಿಲುಕಿ ಹಾಕಿಕೊಂಡಿದ್ದರು. ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿದ್ದರಿಂದ ಪ್ರಧಾನಿ ಮೋದಿ ಮೇಲ್ಸೇತುವೆ ಮೇಲೆಯೇ ಸಿಲುಕಿಕೊಂಡಿದ್ದರು. ಈ ಹಿನ್ನೆಲೆ ದೇಶದ ಮೂಲೆ ಮೂಲೆಯಲ್ಲೂ ಪ್ರಧಾನಿ ಮೋದಿಗೆ ದೀರ್ಘಾಯುಷ್ಯ ಪ್ರಾಪ್ತಿಯಾಗಲಿ ಎಂದು ಮಹಾ ಮೃತ್ಯುಂಜಯ ಹೋಮ ನಡೆಯಿತು. ಸಚಿವರಾದ ಈಶ್ವರಪ್ಪ, ಸಿ.ಸಿ.ಪಾಟೀಲ್,ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರಿ ಸೇರಿ ಹಲವು ಸಚಿವರು, ಶಾಸಕರು ಯಾಗದಲ್ಲಿ ಭಾಗಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement