ಫೆಬ್ರವರಿ 6ರಂದು ಧಾರವಾಡ ಜೆಎಸ್ಎಸ್ ನಲ್ಲಿ ಮಹಿಳೆಯರಿಗಾಗಿಯೇ ಉದ್ಯೋಗ ಮೇಳ

ಧಾರವಾಡ: ಇದೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಮಹಿಳೆಯರಿಗಾಗಿ ಮೀಸಲಾದ ಉದ್ಯೋಗ ಮೇಳವನ್ನು ಫೆಬ್ರುವರಿ 6ರಂದು ಭಾನುವಾರ ಧಾರವಾಡದಲ್ಲಿ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ ಕ್ಯಾಂಪಸ್ಸಿನಲ್ಲಿ ನಡೆಯಲಿದೆ.

ರ‍್ಯಾಪಿಡ್ ಸಂಸ್ಥೆ, ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ಹುಬ್ಬಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ವಿದ್ಯಾವಂತ ಮಹಿಳೆಯರೊಂದಿಗೆ ಟೇಲರಿಂಗ್, ಕಸೂತಿ ಮತ್ತು ವಿವಿಧ ತರಹದ ವೃತ್ತಿಯಲ್ಲಿ ಕೌಶಲ್ಯ ಹೊಂದಿರುವ ಅನಕ್ಷರಸ್ಥ ಮಹಿಳೆಯರು ಹಾಗೂ ಗೃಹ ಉದ್ಯೋಗಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಮಹಿಳೆಯರು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಮಹಿಳಾ ಉದ್ಯೋಗದಾತರು ಈ ಮೇಳದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 0836-2462202 ಅಥವಾ 0836-7967759ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement