ಯಲ್ಲಾಪುರ: ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳ ಜನನ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಹೆರಿಗೆಗೆಂದು ಆಸ್ಪತ್ರೆಗೆ ಕರೆತರುತ್ತಿರುವಾಗಲೇ ಮಹಿಳೆ 108 ಅಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿದ್ಯಮಾನ ವರದಿಯಾಗಿದೆ..!
ತಾಲೂಕಿನ ಕರಡೊಳ್ಳಿಯ ಸುಮಿತ್ರಾ ಶಿಂಧೆ ಎಂಬವರನ್ನು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ (ಜನವರಿ 17) ಹೆರಿಗೆ ಮಾಡಿಸಲೆಂದು ಆಸ್ಪತ್ರೆಗೆ ದಾಖಲಿಸಲು 108 ಅಂಬ್ಯುಲೆನ್ಸ್ ವಾಹನದಲ್ಲಿ ಕರೆತರಲಾಗುತ್ತಿತ್ತು. ಈ ವೇಳೆ ಮಹಿಳೆಗೆ ಅಂಬುಲೆನ್ಸ್‌ ನಲ್ಲಿಯೇ ಹೆರಿಗೆಯಾಗಿದೆ.

ಅಂಬುಲೆನ್ಸ್‌ ತಂತ್ರಜ್ಞ ಶಿವಕುಮಾರ ಇಟಗಿ ಹಾಗೂ ಚಾಲಕ ಅನಿಲ್ ನಾಯ್ಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಗಂಡು ಹಾಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ
ಮಕ್ಕಳ ತೂಕದ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಇಂಥದ್ದೇ ಮತ್ತೊಂದು ಘಟನೆಯಲ್ಲಿ ಎರಡು ದಿನಗಳ ಹಿಂದೆ ಗರ್ಭಿಣಿಯೊಬ್ಬರಿಗೆ ಅಂಬುಲೆನ್ಸ್‌ನಲ್ಲಿಯೇ ಹೆರಿಗೆಯಾಗಿತ್ತು ಎನ್ನಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement