ಕರ್ನಾಟಕದಲ್ಲಿ ಬುಧವಾರ 40,499 ಕೊರೊನಾ ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಸ್‍ಗಳು 40 ಸಾವಿರ ದಾಟಿ ಮುನ್ನುಗ್ಗುತ್ತಿದೆ. ನಿನ್ನೆ 41,457 ಕೇಸ್ ದಾಖಲಾಗಿದ್ದರೆ, ಇಂದು 40,499 ಕೇಸ್ ವರದಿಯಾಗಿದೆ. ಇಂದು ಒಟ್ಟು 21 ಮಂದಿ ಮೃತಪಟ್ಟಿದ್ದಾರೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರು ಬುಧವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 24,135 ಮಂದಿಗೆ ಸೋಂಕು ತಗುಲಿದ್ದು, 5 ಮಂದಿ ಮರಣಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,84,000ಕ್ಕೆ ತಲುಪಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 18.80%ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,67,650ಕ್ಕೆ ಏರಿಕೆ ಕಂಡಿದೆ ಇಂದು ವಿವಿಧ ಆಸ್ಪತ್ರೆಯಿಂದ 23,209 ಮಂದಿ ಬಿಡುಗಡೆಗೊಂಡಿದ್ದು, ಒಟ್ಟು 2,15,312 ಮಂದಿಗೆ ಪರೀಕ್ಷೆ ಮಾಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement