ಕೇರಳ ಹೈಕೋರ್ಟ್‌ನ ವರ್ಚುವಲ್‌ ವಿಚಾರಣೆಗೆ ಸ್ನಾನಗೃಹದಿಂದ ಹಾಜರಾದ ವ್ಯಕ್ತಿ..!

ತಿರುವನಂತಪುರಂ: ಕೋವಿಡ್‌ ಪ್ರಕರಣಗಳು ಉಲ್ಬಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ಆರಂಭಿಸಿದ ಬಳಿಕ ವಕೀಲರು ಮತ್ತು ದಾವೆದಾರರು ನ್ಯಾಯಾಲಯದ ಶಿಷ್ಟಾಚಾರ ಉಲ್ಲಂಘಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಕೇರಳ ಹೈಕೋರ್ಟ್‌ ಕೂಡ ಅಂತಹದ್ದೊಂದು ಘಟನೆಗೆ ಸೋಮವಾರ ಸಾಕ್ಷಿಯಾಯಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಸೋಮವಾರದಿಂದ ಹೈಕೋರ್ಟ್‌ ಸಂಪೂರ್ಣವಾಗಿ ಆನ್‌ಲೈನ್‌ ಕಲಾಪಕ್ಕೆ ಹೊರಳಿದ್ದು ನ್ಯಾ. ವಿ ಜಿ ಅರುಣ್‌ ಅವರಿದ್ದ ಪೀಠ ವರ್ಚುವಲ್‌ ವಿಚಾರಣೆ ನಡೆಸುತ್ತಿರುವಾಗ ವ್ಯಕ್ತಿಯೊಬ್ಬ ಹಲ್ಲುಜ್ಜುತ್ತಾ, ಕ್ಷೌರ ಮಾಡಿಕೊಳ್ಳುತ್ತಾ ಆಗಾಗ್ಗೆ ಕ್ಯಾಮೆರಾ ಮುಂದೆ ಬರುತ್ತಿರುವುದು ಕಂಡುಬಂತು.
ಆಗಷ್ಟೇ ನಿದ್ದೆಯಿಂದ ಎದ್ದುಬಂದಂತೆ ಕಂಡ ವ್ಯಕ್ತಿ ವಾಶ್‌ ಬೇಸಿನ್‌ ಇದ್ದ ಕೋಣೆಯಲ್ಲಿ ಹಿಂದೆ ಮುಂದೆ ನಡೆಯುತ್ತಿರುವುದು, ಶೇವ್‌ ಮಾಡಿಕೊಂಡು ಹಲ್ಲುಜ್ಜುತ್ತಿರುವುದು ವಿಡಿಯೊದಲ್ಲಿ ಗೋಚರಿಸಿತು. ನ್ಯಾ. ಅರುಣ್‌ ಬಹುಶಃ ಈ ವಿದ್ಯಮಾನವನ್ನು ಗಮನಿಸಲಿಲ್ಲ. ಆದರೆ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತು. ವರ್ಚುವಲ್‌ ವಿಚಾರಣೆ ನಡೆಯುವಾಗ ತಿಳಿಯದೆಯೂ ಇಂತಹ ಚಟುವಟಿಕೆಯಲ್ಲಿ ತೊಡಗುವುದು ಅನುಚಿತ ವರ್ತನೆಯಾಗಿದ್ದು ಅಂತಹ ಹಲವು ನಿದರ್ಶನಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆ ಸಾಲಿಗೆ ಇದು ಮತ್ತೊಂದು ಸೇರ್ಪಡೆಯಾಗಿದೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement