ಆಹಾರಕ್ಕಾಗಿ ಒಡಿಶಾ ಗ್ರಾಮಕ್ಕೆ ನುಗ್ಗಿ ಬಂದ ಕಾಡು ಕರಡಿ -ಅದರ ಮರಿ…!- ದೃಶ್ಯ ವಿಡಿಯೊದಲ್ಲಿ ಸೆರೆ

ಭುನವೇಶ್ವರ: ಒಡಿಸ್ಸಾದಲ್ಲಿ ಎರಡು ಕಾಡು ಕರಡಿಗಳು ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ನಬ್ರಂಗ್‌ಪುರ ಜಿಲ್ಲೆಯ ಉಮರ್‌ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ತಾಯಿ ಕರಡಿ ಮತ್ತು ಅದರ ಮರಿ ಆಹಾರ ಹುಡುಕುತ್ತಾ ಹಳ್ಳಿಗೆ ನುಗ್ಗಿದೆ. ಗ್ರಾಮವು ಹತ್ತಿರದ ಅರಣ್ಯ ವ್ಯಾಪ್ತಿಯ ಪಕ್ಕದಲ್ಲಿ ಇರುವುದರಿಂದ, ಕರಡಿಗಳು ಹಸಿವಿನಿಂದ ಬಹುಶಃ ಮಾನವ ವಾಸಸ್ಥಾನಕ್ಕೆ ಬಂದಿವೆ.
ಇದೀಗ ವೈರಲ್ ಆಗುತ್ತಿರುವ ಕ್ಲಿಪ್, ಕರಡಿಗಳು ಮನೆಯೊಂದಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಹಳ್ಳಿಯ ನಾಯಿಗಳು ಉಗ್ರವಾಗಿ ಬೊಗಳುವುದನ್ನು ತೋರಿಸಿದೆ.
ಆದಾಗ್ಯೂ, ಕೆಲವು ಗ್ರಾಮಸ್ಥರು ಕರಡಿಗಳನ್ನು ಬೆಂಕಿಯಿಂದ ಹೆದರಿಸಿ ಸಮೀಪದ ಮುತುರ್ಮಾ ಅರಣ್ಯ ವ್ಯಾಪ್ತಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾದರು. ಕರಡಿಗಳು ಯಾವುದೇ ಹಾನಿ ಮಾಡದೆ ಕಾಡಿಗೆ ಮರಳಿದ್ದರಿಂದ ಗ್ರಾಮಸ್ಥರ ಮೇಲೆ ಯಾವುದೇ ದಾಳಿ ನಡೆಸಿದ ಘಟನೆಗಳು ವರದಿಯಾಗಿಲ್ಲ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement