ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಇಂದು,ಶುಕ್ರವಾರ 48,049 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು 22 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 18,115 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,23,143ಕ್ಕೆ ತಲುಪಿದೆ. ಪಾಸಿಟಿವಿಟಿ ರೇಟ್ 19.23% ರಷ್ಟಿದೆ. ಬೆಂಗಳೂರಿನಲ್ಲಿ ನಿನ್ನೆಗೆ ಹೋಲಿಕೆ ಮಾಡಿದರೆ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ. ಇಂದು ಒಟ್ಟು 29,068 ಪ್ರಕರಣಗಳು ದಾಖಲಾಗಿದೆ. ನಿನ್ನೆ ಬೆಂಗಳೂರಿನಲ್ಲಿ 30,540 ಕೇಸ್ ದಾಖಲಾಗಿತ್ತು. ಒಟ್ಟು 6 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 2,23,000 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಮಾಹಿತಿ
ಬಾಗಲಕೋಟೆ -85, ಬಳ್ಳಾರಿ -767, ಬೆಳಗಾವಿ -518, ಬೆಂಗಳೂರು ಗ್ರಾಮಾಂತರ -1,036, ಬೆಂಗಳೂರು ನಗರ -29,068, ಬೀದರ್ -351, ಚಾಮರಾಜನಗರ -576, ಚಿಕ್ಕಬಳ್ಳಾಪುರ -772, ಚಿಕ್ಕಮಗಳೂರು -319, ಚಿತ್ರದುರ್ಗ -438, ದಕ್ಷಿಣ ಕನ್ನಡ -897, ದಾವಣಗೆರೆ -249, ಧಾರವಾಡ -373, ಗದಗ -336, ಹಾಸನ -1,889, ಹಾವೇರಿ -143, ಕಲಬುರಗಿ -1,164, ಕೊಡಗು -317, ಕೋಲಾರ -645, ಕೊಪ್ಪಳ -324, ಮಂಡ್ಯ -1,506, ಮೈಸೂರು -915, ರಾಯಚೂರು -367, ರಾಮನಗರ -330, ಶಿವಮೊಗ್ಗ -500, ತುಮಕೂರು -2,021, ಉಡುಪಿ -1,018, ಉತ್ತರ ಕನ್ನಡ -682, ವಿಜಯಪುರ -327 ಮತ್ತು ಯಾದಗಿರಿ-116 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ