ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆಗೆ ನೇತಾಜಿ ಪ್ರಶಸ್ತಿ ಪ್ರದಾನ

ಕೋಲ್ಕತ್ತಾ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ನೇತಾಜಿ ರಿಸರ್ಚ್ ಬ್ಯೂರೋ 2022 ನೇತಾಜಿ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಿದೆ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಎಲ್ಜಿನ್ ರೋಡ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕೋಲ್ಕತ್ತಾದ ಜಪಾನ್ ಕಾನ್ಸುಲ್ ಜನರಲ್ ನಕಮುರಾ ಯುಟಕಾ ಅವರು ಅಬೆ ಪರವಾಗಿ ಗೌರವವನ್ನು ಸ್ವೀಕರಿಸಿದರು.
ಭಾರತದಲ್ಲಿನ ಜಪಾನ್ ರಾಯಭಾರಿ ಸತೋಶಿ ಸುಜುಕಿ ಅವರು ನವದೆಹಲಿಯಿಂದ ವರ್ಚುವಲ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಅವರ ಮೊಮ್ಮಗ ಮತ್ತು ನೇತಾಜಿ ಸಂಶೋಧನಾ ಬ್ಯೂರೋದ ನಿರ್ದೇಶಕ ಸುಗತ ಬೋಸ್, ಅಬೆಯನ್ನು ನೇತಾಜಿಯ ಮಹಾನ್ ಅಭಿಮಾನಿ ಎಂದು ಬಣ್ಣಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

ನಿಮ್ಮ ಕಾಮೆಂಟ್ ಬರೆಯಿರಿ

advertisement