ಮುಂಬೈ: ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೇವಲ 3,568 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿರುವುದರಿಂದ ಮುಂಬೈನಲ್ಲಿ ಶನಿವಾರದಂದು ದೈನಂದಿನ ಕೊರೊನಾ ವೈರಸ್ ಪ್ರಕರಣಗಳಲ್ಲಿ ಸುಮಾರು 1,500 ಇಳಿಕೆಯಾಗಿದೆ ಎಂದು ಬಿಎಂಸಿ ತಿಳಿಸಿದೆ.
ನಗರದಲ್ಲಿ 10 ಸಾಂಕ್ರಾಮಿಕ-ಸಂಬಂಧಿತ ಸಾವುಗಳು ದಾಖಲಾಗಿವೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಕಟಣೆ ತಿಳಿಸಿದೆ.
ಮುಂಬೈನಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳು ಇಳಿಮುಖವಾಗಿರುವುದು ಇದು ಸತತ ಮೂರನೇ ದಿನವಾಗಿದೆ. 3,568 ಹೊಸ ರೋಗಿಗಳಲ್ಲಿ 2,998 – ಅಂದರೆ 84%ರಷ್ಟು ಜನರಿಗೆ ರೋಗಲಕ್ಷಣಗಳಿಲ್ಲ ಎಂದು ಬಿಎಂಸಿ ಹೇಳಿದೆ
ಇದಲ್ಲದೆ, ಕೇವಲ 485 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಲ್ಲಿ 76 ರೋಗಿಗಳಿಗೆ ಆಮ್ಲಜನಕದ ಬೆಂಬಲವನ್ನು ನೀಡಲಾಯಿತು. ವಿವಿಧ ಆಸ್ಪತ್ರೆಗಳ ಒಟ್ಟು 37,746 ಮೀಸಲು ಹಾಸಿಗೆಗಳಲ್ಲಿ 4,293 ಹಾಸಿಗೆಗಳಲ್ಲಿ ಪ್ರಸ್ತುತ ಕೋವಿಡ್ ರೋಗಿಗಳಿದ್ದಾರೆ. ಮುಂಬೈನ ಕೊರೊನಾ ವೈರಸ್ ಚೇತರಿಕೆ ದರವು ಈಗ ಶೇಕಡಾ 96 ರಷ್ಟಿದೆ, ಆದರೆ ಪ್ರಕರಣಗಳ ದ್ವಿಗುಣಗೊಳಿಸುವ ಅವಧಿಯು ಶುಕ್ರವಾರದ 72 ದಿನಗಳಿಂದ 105 ದಿನಗಳ ವರೆಗೆ ಸುಧಾರಿಸಿದೆ ಎಂದು ಬಿಎಂಸಿ ತಿಳಿಸಿದೆ.
ಮುಂಬೈನಲ್ಲಿ ಪ್ರಸ್ತುತ 17,497 ಸಕ್ರಿಯ ಕೋವಿಡ್-19 ರೋಗಿಗಳಿದ್ದಾರೆ. ಜನವರಿ 15 ರಿಂದ 21 ರ ನಡುವಿನ ಅವಧಿಯಲ್ಲಿ ಮುಂಬೈನಲ್ಲಿ ಕೋವಿಡ್-19 ಪ್ರಕರಣಗಳ ಒಟ್ಟಾರೆ ಬೆಳವಣಿಗೆಯ ದರವು 0.64%ರಷ್ಟಿದೆ.
ನಿಮ್ಮ ಕಾಮೆಂಟ್ ಬರೆಯಿರಿ