ಬೆಂಗಳೂರು : ಕೋವಿಡ್ ವಿರುದ್ಧ ಲಸಿಕಾಕರಣದಲ್ಲಿ ಕರ್ನಾಟಕ ರಾಜ್ಯ ಮೋದಲ ಡೋಸ್ ನಲ್ಲಿ 100 % ಸಾಧನೆ ಮಾಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
100 % ಮೊದಲ ಡೋಸ್ ವ್ಯಾಪ್ತಿ ಗುರಿ ಸಾಧಿಸಲು ನಮಗೆ 1 ವರ್ಷ ಮತ್ತು 7 ದಿನಗಳನ್ನು ತೆಗೆದುಕೊಂಡಿತು!, ಕರ್ನಾಟಕ ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ (>4 ಕೋಟಿ ವಯಸ್ಕ ಜನಸಂಖ್ಯೆ) ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಅದ್ಭುತ ಸಾಧನೆಗಾಗಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಸಚಿವ ಸುಧಾಕರ ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ