ಉತ್ಖನನ ನಡೆಸಲು ಮನವಿ

ಧಾರವಾಡ: ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಜೈನ ಬಸದಿ ಇದ್ದ ಬಗ್ಗೆ ಗ್ರಾಮದ ಹಿರಿಯರಿಂದ ತಿಳಿದು ಬಂದಿದ್ದು, ಈ ಹಿಂದೆ ಇದ್ದ ಬಸದಿಯ ಜಾಗದ ಉತ್ಖನನವಾದರೆ ಸಂಪೂರ್ಣ ಮಾಹಿತಿ ಸಿಗಬಹುದು ಎಂಬ ಉದ್ದೇಶದಿಂದ ಉತ್ಖನನ ನಡೆಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಾವೀರ ಉಪಾದ್ಯೆ, ಜಿನ್ನಪ್ಪ ಕುಂದಗೊಳ, ಡಾ. ಜಿನದತ್ತ ಹಡಗಲಿ, ಧಾರವಾಡ ಜೈನ ಮಿಲನದ ಕಾರ್ಯದರ್ಶಿಯಾದ ರಂಜಿತಾ ಹೋಳಿಗಿ, ಕೋಶಾಧ್ಯಕ್ಷರಾದ ರಾಜೇಶ್ವರಿ ಶೆಟ್ಟಿ ಹಾಗೂ ವಿಷ್ಣು ಕಮ್ಮಾರ ಮೊದಲಾದವರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement