ಲಸಿಕೆ ಬೇಡವೆಂದು ಮನೆ ಏರಿ ಕುಳಿತಿದ್ದ ಯುವಕ.. ಮನವೊಲಿಸಿದ ತಹಶೀಲ್ದಾರ..!

ಚಿತ್ರದುರ್ಗ: ಕೊರೊನಾ ಲಸಿಕೆ ಬೇಡವೆಂದು ಮನೆ ಏರಿ ಕುಳಿತಿದ್ದ ಯುವಕನೊಬ್ಬನ ಮನವೊಲಿಸಿ ಕೊರೊನಾ ಲಸಿಕೆ ನೀಡುವಲ್ಲಿ ಚಳ್ಳಕೆರೆ ತಹಶೀಲ್ದಾರ್ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್. ದೇವರಹಳ್ಳಿ ಗ್ರಾಮದಲ್ಲಿ ಇಂದು, ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಒಂದು ಹಾಗೂ ಎರಡನೇ ಹಂತದ ಲಸಿಕೆ ಪಡೆಯದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಲಸಿಕೆ ನೀಡಲಾಗುತ್ತಿತ್ತು. ಆಗ ಮಂಜುನಾಥ್ ಎಂಬ ಯುವಕ ಮೊದಲನೆ ಲಸಿಕೆ ಪಡೆದಿಲ್ಲ ಎಎಂದು ಮಾಹಿತಿ ಪಡೆದ ಅಧಿಕಾರಿಗಳು ಲಸಿಕೆ ಹಾಕಲು ಹೋದಾಗ, ಮಂಜುನಾಥ್ ನನಗೆ ಲಸಿಕೆ ಬೇಡ ಎಂದು ಹಠ ಹಿಡಿದು ಮನೆ ಏರಿ ಕುಳಿತುಬಿಟ್ಟಿದ್ದ..!
ಆಗ ಸ್ಥಳಕ್ಕೆ ಧಾವಿಸಿದ ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಹಾಗೂ ಆರೋಗ್ಯ ಅಧಿಕಾರಿಗಳು, ಗ್ರಾಪಂ ಸದಸ್ಯರು, ಕುಟುಂಬಸ್ಥರು ಯುವಕನ ಮನವೊಲಿಸಿದರು. ನಂತರ ಮನೆ ಮೇಲಿನಿಂದ ಕೆಳಗಿಳಿದ ಯುವಕ ಲಸಿಕೆ ಹಾಕಿಸಿಕೊಂಡಿದ್ದಾನೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement