ರಾಜ್ಯದಲ್ಲಿ 75 ಸರ್ಕಾರಿ ಶಾಲೆಗಳು ನೇತಾಜಿ ಅಮೃತ ಶಾಲೆ ಎಂದು ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಜಿಲ್ಲೆಯ ಎರಡು ಶಾಲೆಗಳಂತೆ ರಾಜ್ಯದ 75 ಶಾಲೆಗಳನ್ನು ನೇತಾಜಿ ಅಮೃತ ಶಾಲೆಗಳೆಂದು ( Netaji Ambrut School ) ರಾಜ್ಯ ಸರ್ಕಾರ ಘೋಷಿಸಿದೆ.
ಈ ಶಾಲೆಗಳಲ್ಲಿ ಎನ್ ಸಿಸಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದೆ. ಈ ಬಗ್ಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ನಡಾವಳಿ ಹೊರಡಿಸಿದ್ದು, ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಕನಿಷ್ಠ 2ರಂತೆ ಒಟ್ಟು 75 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿದೆ.
ನೇತಾಜಿ ಅಮೃತ ಶಾಲೆಗಳೆಂದು ಘೋಷಿಸಲ್ಪಟ್ಟ ಪ್ರತಿ ಶಾಲೆಯಿಂದ 100 ವಿದ್ಯಾರ್ಥಿಗಳಂತೆ ಒಟ್ಟು 7500 ವಿದ್ಯಾರ್ಥಿಗಳಿಗೆ ಎನ್ ಸಿ ಸಿ ತರಬೇತಿ ನೀಡಲು ಅನುಕೂಲವಾಗುವಂತೆ ಅದಕ್ಕೆ ತಗಲುವ ವೆಚ್ಚ ಒಬ್ಬ ವಿದ್ಯಾರ್ಥಿಗೆ 12,000 ರೂ.ಗಳಂತೆ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement