ಕರ್ನಾಟಕದ ಯೋಧ ಕಾಶಿರಾಯ ಸೇರಿ ಆರು ಜನರಿಗೆ ಶೌರ್ಯ ಪ್ರಶಸ್ತಿ ಪ್ರದಾನ

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಜೊತೆ ಹೋರಾಡಿ ಹುತಾತ್ಮರಾದ ಕರ್ನಾಟಕದ ವೀರ ಯೋಧ ಕಾಶಿರಾಯ​​ ಬಮ್ಮನಹಳ್ಳಿ ಸೇರಿದಂತೆ ಆರು ಜನರಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಪ್ರಶಸ್ತಿ ದೆಹಲಿಯಲ್ಲಿ ಬುಧವಾರ ಪ್ರಶಸ್ತಿ ಪ್ರದಾನ ಮಾಡಿದರು.
73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆರು ಮಂದಿ ವೀರಯೋಧರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಈ ಪೈಕಿ ಐವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಲಾಗಿದೆ.
ಶೌರ್ಯ ಪ್ರಶಸ್ತಿ ಪಡೆದುಕೊಂಡವರಲ್ಲಿ ಸುಬೇದಾರ್ ಎಂ. ಶ್ರೀಜಿತ್ (ಮರಣೋತ್ತರವಾಗಿ ಶೌರ್ಯ ಚಕ್ರ ), 17 ಮದ್ರಾಸ್ ರೆಜಿಮೆಂಟ್‌ನಿಂದ ಸಿಪಾಯಿ ಮರುಪ್ರೋಲು ಜಸ್ವಂತ್ ಕುಮಾರ್ ರೆಡ್ಡಿ (ಮರಣೋತ್ತರವಾಗಿ ಶೌರ್ಯ ಚಕ್ರ), ರಜಪೂತ ರೆಜಿಮೆಂಟ್‌ನಿಂದ ಹವಾಲ್ದಾರ್ ಅನಿಲ್ ಕುಮಾರ್ ತೋಮರ್ (ಮರಣೋತ್ತರವಾಗಿ ಶೌರ್ಯ ಚಕ್ರ), ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನಿಂದ ಹವಾಲ್ದಾರ್ ಕಾಶಿರಾಯ ಬಮ್ಮನಹಳ್ಳಿ (ಮರಣೋತ್ತರವಾಗಿ ಶೌರ್ಯ ಚಕ್ರ), ಜಾಟ್ ರೆಜಿಮೆಂಟ್‌ನ ಹವಾಲ್ದಾರ್ ಪಿಂಕುಕುಮಾರ್ (ಮರಣೋತ್ತರವಾಗಿ ಶೌರ್ಯ ಚಕ್ರ ),5 ಅಸ್ಸೋಂ ರೈಫಲ್ಸ್‌ನ ರೈಫಲ್‌ಮ್ಯಾನ್ ರಾಕೇಶ್ ಶರ್ಮಾ (ಶೌರ್ಯ ಚಕ್ರ) ಪ್ರಶಸ್ತಿ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement