ಮೆಗಾಸ್ಟಾರ್‌ ಚಿರಂಜೀವಿಗೆ ಕೊರೊನಾ ಸೋಂಕು

ಹೈದರಾಬಾದ್: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಸೋಂಕು ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿರುವ ನಟ ಚಿರಂಜೀವಿ, ನನಗೆ ಕೋವಿಡ್-19 ಸೋಂಕಿನ ಕೆಲ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೆಸ್ಟ್ ಮಾಡಿಸಿದಾಗ ಕಳೆದ ರಾತ್ರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಾನು ಮನೆಯಲ್ಲೇ ಐಸೋಲೇಷನ್‍ಗೆ ಒಳಗಾಗಿದ್ದೇನೆ. ಕೆಲದಿನಗಳಿಂದ ನನ್ನ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದೀರೋ ಅವರೆಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ. ಆದಷ್ಟು ಬೇಗ ಗುಣಮುಖಗೊಂಡು ನಿಮ್ಮ ಮುಂದೆ ಬರುತ್ತೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
ಚಿರಂಜೀವಿ ನಟನೆಯ 4 ಸಿನಿಮಾಗಳು ಈಗಾಗಲೇ ಬಿಡುಗಡೆಗಾಗಿ ಸಿದ್ಧಗೊಂಡು ನಿಂತಿದೆ. ಸದ್ಯದಲ್ಲೇ ಆಚಾರ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಏಪ್ರಿಲ್ 1 ರಂದು ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement