ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪತಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ…!

ಆನಂದ್: ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ಗುಜರಾತಿನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. ಈಗ ಪೊಲೀಸರು 28 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.
ಉಮ್ರೆತ್ ತಾಲೂಕಿನ ನಿವಾಸಿಯಾದ 27 ವರ್ಷದ ಮಹಿಳೆ ತನ್ನ ಪೋಷಕರೊಂದಿಗೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದಳು. ಮಹಿಳೆ 2019 ರ ನವೆಂಬರ್‌ನಲ್ಲಿ ಮಹಿಸಾಗರ್ ಜಿಲ್ಲೆಯ ದೇಬರ್ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ ಮಹಿಳೆಯನ್ನು ಗಂಡನ ಮನೆಯಿಂದ ಹೊರಗೆ ತಳ್ಳಿದ ನಂತರ ಆಕೆ ಪೋಷಕರೊಂದಿಗೆ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಕಳೆದ ವರ್ಷ ಜುಲೈನಲ್ಲಿ ತ್ರಿವಳಿ ತಲಾಖ್ ಹೇಳಿದ್ದನು ಮತ್ತು ದಂಪತಿ ನಡುವೆ ಜಗಳ ನಡೆದು ಮಹಿಳೆಯನ್ನು ಮನೆಯಿಂದ ಹೊರಹೋಗುವಂತೆ ಒತ್ತಾಯಿಸಲಾಯಿತು.ತ್ರಿವಳಿ ತಲಾಖ್ ಕಾನೂನಿನ ಬಗ್ಗೆ ನನಗೆ ತಿಳಿದಿರಲಿಲ್ಲ ಮತ್ತು ಆಗ ದೂರು ನೀಡಿರಲಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ತನ್ನ ಪತಿಯ ಚಟುವಟಿಕೆಯನ್ನು ಪರಿಶೀಲಿಸಲು ಬಯಸಿ ಹುಸಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆಯನ್ನು ಸೃಷ್ಟಿಸಿದ್ದಳು. ಆದರೆ, ಆ ಖಾತೆಯ ಹಿಂದೆ ಪತ್ನಿಯ ಕೈವಾಡವಿದೆ ಎಂದು ಪತಿಗೆ ತಿಳಿದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತ್ರಿವಳಿ ತಲಾಖ್ ಹೇಳಿದ್ದಾನೆ. ಆಕೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿ ಬುಧವಾರ ಪೊಲೀಸರನ್ನು ಸಂಪರ್ಕಿಸಿದರು” ಎಂದು ಸಬ್ ಇನ್ಸ್‌ಪೆಕ್ಟರ್ ಚೇತನ್‌ಸಿನ್ಹ್ ರಾಥೋಡ್ ಹೇಳಿರುವುದಾಗಿ ವರದಿ ತಿಳಿಸಿದೆ.
ಈ ಹಿಂದೆಯೂ ಸಂತ್ರಸ್ತೆ ಪತಿ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದರು. ಸದ್ಯಕ್ಕೆ ತ್ರಿವಳಿ ತಲಾಖ್ ದೂರಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆ ವ್ಯಕ್ತಿಗೆ ಪೊಲೀಸರು ಇನ್ನೂ ಸಮನ್ಸ್ ನೀಡಿಲ್ಲ

ಪ್ರಮುಖ ಸುದ್ದಿ :-   'ಮೋಸ್ಟ್ ವಾಂಟೆಡ್' ಭಯೋತ್ಪಾದಕ ಸೇರಿದಂತೆ ಮೂವರು ಉಗ್ರರನ್ನು ಎನ್‌ಕೌಂಟರ್‌ ವೇಳೆ ಹೊಡೆದುರುಳಿಸಿದ ಭದ್ರತಾ ಪಡೆಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement