ಕರ್ನಾಟಕದಲ್ಲಿ 38 ಸಾವಿರಕ್ಕೆ ಇಳಿದ ದೈನಂದಿನ ಕೊರೊನಾ ಪ್ರಕರಣ: ಬೆಂಗಳೂರಲ್ಲೂ ಇಳಿಕೆ ಕಾಣುತ್ತಿರುವ ಸೋಂಕು..

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಹೊಸದಾಗಿ 38,083 ಕೊರೊನಾ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.

ಇದೇವೇಳೆ ರಾಜ್ಯದಲ್ಲಿ 67,236 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ರಾಜ್ಯಾದ್ಯಂತ ಚಿಕಿತ್ಸೆ ಫಲಿಸದೆ 49 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸದ್ಯ 3,28,711ಕ್ಕೆ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿನ ಕೋವಿಡ್ ಪಾಸಿಟಿವಿಟಿ ದರ ಶೇ. 20.44ರಷ್ಟಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಗುರುವಾರ 17,717 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರದಲ್ಲಿ ಸದ್ಯ 1.89 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಗುರುವಾರ ಬೆಂಗಳೂರಿನಲ್ಲಿ 12 ಕೋವಿಡ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಸೋಂಕಿತರು:
ಬಾಗಲಕೋಟೆ 345, ಬಳ್ಳಾರಿ 651, ಬೆಳಗಾವಿ 480, ಬೆಂಗಳೂರು ಗ್ರಾಮಾಂತರ 1,091, ಬೀದರ್ 250, ಚಾಮರಾಜನಗರ 763, ಚಿಕ್ಕಬಳ್ಳಾಪುರ 665, ಚಿಕ್ಕಮಗಳೂರು 244, ಚಿತ್ರದುರ್ಗ 286, ದಕ್ಷಿಣ ಕನ್ನಡ 678, ದಾವಣಗೆರೆ 257, ಧಾರವಾಡ 1,155, ಗದಗ 267, ಹಾಸನ 1,452, ಹಾವೇರಿ 184, ಕಲಬುರಗಿ 812, ಕೊಡಗು 707, ಕೋಲಾರ 572, ಕೊಪ್ಪಳ 500, ಮಂಡ್ಯ 1,802, ಮೈಸೂರು 2,587, ರಾಯಚೂರು 261, ರಾಮನಗರ 279, ಶಿವಮೊಗ್ಗ 626, ತುಮಕೂರು 1,584, ಉಡುಪಿ 948, ಉತ್ತರ ಕನ್ನಡ 567, ವಿಜಯಪುರ 223 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗುರುವಾರ 130 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಪ್ರಮುಖ ಸುದ್ದಿ :-   ಸೋನಿಯಾ ಗಾಂಧಿಗೆ ಸಿದ್ದರಾಮಯ್ಯರನ್ನು ಪರಿಚಯಿಸಿದ್ದೇ ನಾನು, ಲಾಟರಿ ಹೊಡೆದ್ರು ಸಿಎಂ ಆದ್ರು ; ಬಿ.ಆರ್. ಪಾಟೀಲ ಫೋನ್ ಕರೆ ಲೀಕ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement