ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಸುಧಾರಣೆ: ವೆಂಟಿಲೇಟರ್ ತೆಗೆದ ವೈದ್ಯರು

ಮುಂಬೈ: ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಈಗ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದು, ಅವರಿಗೆ ವೆಂಟಿಲೇಟರ್‌ ತೆಗೆಯಲಾಗಿದೆ.
ಲತಾ ಮಂಗೇಶ್ಕರ್‌ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಮುಂದುವರಿದಿದೆ ಎಂದು ಕುಟುಂಬದ ಹೇಳಿಕೆ ತಿಳಿಸಿದೆ.
ಪ್ರಸ್ತುತ, ಅವರು ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ಡಾ. ಪ್ರತೀತ್ ಸಮ್ದಾನಿ ನೇತೃತ್ವದ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗಾಗಿ ನಾವು ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿಕೆ ತಿಳಿಸಿದೆ.
92 ವರ್ಷದ ಲತಾ ಮಂಗೇಶ್ಕರ್‌ ಕೋವಿಡ್ -19 ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನವರಿ 11ರಂದು ಕೊರೊನಾ ವೈರಸ್ ಸೋಂಕಿಗೆ ಒಳಗಾದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement