ಐಟಿ ಸೋಗಿನಲ್ಲಿ ಮನೆಗೆ ಬಂದು ದರೋಡೆ: ಐವರ ಬಂಧನ

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಂಜಯನಗರ ಪೊಲೀಸರು ೧.೭ ಲಕ್ಷ ನಗದು, ಕಾರು, ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಜಯನಗರದ ಮಂಜುನಾಥ, ಮಹಮ್ಮದ್ ಶೋಯಬ್ ರಬ್ಬಾನಿ ಅಲಿಯಾಸ್ ಪಾಕರ್ ಅಲಿ, ಪ್ರಶಾಂತಕುಮಾರ್, ದುರ್ಗೇಶ ಹಾಗೂ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ವಸಂತರಾವ್ ಪಾಟೀಲ್ ತಿಳಿಸಿದ್ದಾರೆ.
ಜನವರಿ ೨೩ ರಂದು ಬೆಳಿಗ್ಗೆ ಸಂಜಯನಗರ ಮನೆಯೊಂದಕ್ಕೆ ಬಂದ ಬಂಧಿತರಲ್ಲಿ ಇಬ್ಬರು ನಾವು ಆದಾಯ ತೆರಿಗೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಮನೆ ಪರೀಶೀಲಿಸಬೇಕೆಂದು ಹೇಳಿ, ವಾರ್ಡ್‌ರೂಬ್‌ನಲ್ಲಿಟ್ಟಿದ್ದ ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ಲಾಕರ್ ನಲ್ಲಿದ್ದ ೩.೫ ಲಕ್ಷ ರೂ. ನಗದು ಹಾಗೂ ಒಂದು ಪಿಸ್ತೂಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಇವರ ಬಗ್ಗೆ ಅನುಮಾನ ಬಂದ ಮನೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ೧.೭ ಲಕ್ಷ ರೂ. ಹಣ, ೧ ಪಿಸ್ತೂಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ೧-ಕಾರು, ಆದಾಯ ತೆರಿಗೆ ಇಲಾಖೆಯ ಹೆಸರಿನ ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮನೆಗಳನ್ನು, ಸೈಟ್‌ಗಳನ್ನು ಹುಡುಕಿ ಕೊಡಿಸುವ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರು.

ಪ್ರಮುಖ ಸುದ್ದಿ :-   ಈಜಲು ತೆರಳಿದ್ದ ನಾಲ್ವರು ಬಾಲಕರು ನೀರುಪಾಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement