ತನ್ನ ಮೊಟ್ಟೆ ರಕ್ಷಿಸಿಕೊಳ್ಳಲು ಬಲಿಷ್ಠ ನಾಗರಹಾವಿನೊಂದಿಗೆ ತಾಯಿ ಕೋಳಿಯ ಸೆಣಸಾಟ..!: ಮಾತೃಶಕ್ತಿ ಎದುರು ಮಣಿದ ಹಾವು

ಯಾವುದೇ ಜೀವಿ ಇರಲಿ, ಮಕ್ಕಳಿಗಾಗಿ ಎಂಥ ಪ್ರಬಲ ಶಕ್ತಿಯ ವಿರುದ್ಧವೂ ನಿಲ್ಲುವುದಕ್ಕೆ  ಹೆದರುವುದಿಲ್ಲ ತಾಯಿ. ಇದು ಮನುಷ್ಯರಲ್ಲಿ ಮಾತ್ರ ಅಲ್ಲ,  ನಾವು ಇಂತಹದ್ದೊಂದು ಪ್ರೀತಿ, ಮಮಕಾರವನ್ನು ಪ್ರಾಣಿ-ಪಕ್ಷಗಳಲ್ಲಿಯೂ ಕಾಣುತ್ತೇವೆ.  ಸದ್ಯ ಅಂತಹದ್ದೇ ವಿಡಿಯೊವೊಂದು ಈಗ ವೈರಲ್ ಆಗುತ್ತಿದೆ.

ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರೂ ಭಯ ಪಡುತ್ತಾರೆ. ಅದು ವಿಷವಿರುವ ಹಾವಾಗಿರಲಿ ಅಥವಾ ಇಲ್ಲದೇ ಇರುವ ಹಾವಾಗಿರಲಿ,  ನೋಡಿದ ತಕ್ಷಣ ಖಂಡಿತಾ  ಬಹುತೇಕರಿಗೆ ಭಯವಾಗುತ್ತದೆ. ಕೆಲ ಜೀವಿಗಳು ಹಾವನ್ನು ಕಂಡರೆ ಭಯ ಪಡುತ್ತವೆ.  ಆದರೆ, ಈ ವಿಡಿಯೊದಲ್ಲಿ ತಾಯಿ ಕೋಳಿಯೊಂದು ತನ್ನ ಮೊಟ್ಟೆಗಳ ರಕ್ಷಣೆಗಾಗಿ ಸರ್ಪವನ್ನೇ ಎದುರಿಸಿದೆ.
ಮೊಟ್ಟೆಗೆ ಕಾವು ಕೊಡುತ್ತಿರುವ ಕೋಳಿ ಮತ್ತು ಎದುರಿಗೆ ಹೆಡೆ ಎತ್ತಿರುವ ಹಾವಿನ ದೃಶ್ಯದ ಮೂಲಕ ಈ ವಿಡಿಯೊ ಕ್ಲಿಪ್ ಅರಂಭವಾಗುತ್ತದೆ. ಮೊಟ್ಟೆ ತಿನ್ನಲು ಕೋಳಿ ಇದ್ದಲ್ಲಿಗೆ ಬಂದ ನಾಗರ ಹಾವು ಕೋಳಿಯ ಮೇಲೆ ದಾಳಿಗೆ ಮುಂದಾಗಿದೆ.  ಆದರೆ, ತಾಯಿ ಕೋಳಿ ಇದಕ್ಕೆ ಅವಕಾಶವನ್ನೇ ಕೊಡಲಿಲ್ಲ.  ಧೈರ್ಯದಿಂದಲೇ ಹಾವಿನ ಎದುರು ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಹಾವು ಅನೇಕ ಸಲ ಪ್ರಯತ್ನಿಸಿದರೂ ಕೋಳಿ ಮೇಲೆ ಅಕ್ರಮಣ ಮಾಡಲು ಅದಕ್ಕೆ ಸಾಧಯವಾಗಲಿಲ್ಲ, ಬದಲಾಗಿ ಕೊಳಿಯೇ ಅದರ ಮೇಲೆ ದಾಳಿ ಮಾಡಿದೆ. ಕೋಳಿಯ ದಾಳಿಗೆ ಕೊನೆಗೆ ಹಾವು  ಅಲ್ಲಿಂದ ದೂರ ಹೋಗಿದೆ..!

ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ಕೋಳಿಯ ಧೈರ್ಯ, ಮನೋಬಲವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ಸಾಕಷ್ಟು ವೀಕ್ಷಣೆ ಮತ್ತು ಮೆಚ್ಚುಗೆಯ ಪ್ರತಿಕ್ರಿಯೆಯನ್ನು ಗಳಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement