ಧಾರವಾಡ ಜೆಎಸ್ಎಸ್ ನಲ್ಲಿ ಇಗ್ನೋ ಕೋರ್ಸುಗಳಿಗೆ ಪ್ರವೇಶ ದಿನಾಂಕ ವಿಸ್ತರಣೆ

ಧಾರವಾಡ: ಇಂಧಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸಗಳಿಗೆ ಜನೇವರಿ 2022ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದು.
ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಮ್.ಎ.(ಇಂಗ್ಲೀಷ್) ಎಮ್.ಎ.(ಇತಿಹಾಸ), ಎಮ್.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸಗಳು ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿಲಿಬ್ ಸಾಯನ್ಸ್, ಬಿ.ಟಿ.ಎಸ್, ಮುಂತಾದ ಸ್ನಾತಕ ಕೋರ್ಸಗಳು ಡಿಇಸಿಇ, ಡಿಟಎಸ್, ಡಿಎನ್‌ಎಚ್‌ಇ ಮುಂತಾದ ಡಿಪ್ಲೋಮ ಕೊರ್ಸಗಳು, ಪಿಜಿಡಿಎಚ್‌ಇ, ಪಿಜಿಡಿಆರ್‌ಡಿ, ಪಿಜಿಸಿಇಡಿಎಸ್, ಪಿಜಿಡಿಇಡಿಎಸ್, ಪಿಜಿಡಿಇಎಸ್‌ಡಿ, ಪಿಜಿಡಿಇಎಸ್‌ಡಿ, ಪಿಜಿಡಿಎಲ್‌ಎಎನ್, ಮುಂತಾದ ಪಿಜಿ ಡಿಪ್ಲೋಮ ಕೋರ್ಸಗಳು, ಸಿಟಿಪಿಎಮ್, ಸಿಡಿಎಮ್, ಸಿಇಎಸ್,ಸಿಎಫ್‌ಎನ್, ಸಿಐಜಿ,ಸಿಆರ್‌ಡಿ ಮುಂತಾದ ಸರ್ಟಿಪಿಕೇಟ್ ಕೋರ್ಸಗಳು ಅಧ್ಯಯನಕ್ಕೆ ಲಭ್ಯ ಇದೆ. ಇಗ್ನೋ ಜೆ.ಎಸ.ಎಸ್.ಅಧ್ಯಯನ ಕೇಂದ್ರದಲ್ಲಿ ಸುಮಾರು ೩೮ ವಿವಿಧ ಕೊರ್ಸಗಳು ಅಧ್ಯಯನಕ್ಕೆ ಲಭ್ಯವಿದ್ದು ಜನೇವರಿ ಸಾಲಿನ ಪ್ರವೇಶದ ದಿನಾಂಕವನ್ನು 10-02-2022ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಗ್ನೋ ಧಾರವಾಡ ಜೆ.ಎಸ್.ಎಸ್. ಅಧ್ಯಯನ ಕೇಂದ್ರ ವಿದ್ಯಾಗಿರಿ, ಧಾರವಾಡ, ಇವರ ದೂರವಾಣಿ : : 0836-2468999, 2460886 ಮೊಬೈಲ್ : 9980292705,9845304811ಮತ್ತು 8951871481ಹಾಗೂ ಇ ಮೇಲ್‌ [email protected] ಸಂಪರ್ಕಿಸಬಹುದಾಗಿದೆ. ಪ್ರವೇಶ ಆನ್ ಲೈನ ಮೂಲಕ ಇದ್ದು ignouadmission.samarth.edu.in ಅಥವಾ ವೆಬ್ಸೈಟ್‌: www.ignou.ac.in ನಲ್ಲಿ ಲಭ್ಯವಿದೆ ಎಂದು ಧಾರವಾಡ ಇಗ್ನೋ ಅಧ್ಯಯನ ಕೇಂದ್ರ ಸಂಯೋಜಕ ಸೂರಜ್ ಜೈನ್ ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ರಾಜ್ಯದ ಲೋಕಸಭೆ ಚುನಾವಣೆ 2ನೇ ಹಂತದಲ್ಲಿ ಶೇ.70.03 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ? ಇಲ್ಲಿದೆ ವಿವರ..

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement