ಗಾಲ್ವಾನ್‌ನಲ್ಲಿ ಭಾರತ-ಚೀನಾ ಘರ್ಷಣೆ: ಚೀನಾದ ಹೆಚ್ಚಿನ ಸೈನಿಕರು ಸಾವು ಎಂದ ಆಸ್ಟ್ರೇಲಿಯಾ ಪತ್ರಿಕೆ ತನಿಖಾ ವರದಿ

ನವದೆಹಲಿ: ಆಸ್ಟ್ರೇಲಿಯಾದ ಪ್ರಮುಖ ಪ್ರತ್ರಿಕೆ ದಿ ಕ್ಲಾಕ್ಸನ್ 2020ರಲ್ಲಿ ಭಾರತ ಹಾಗೂ ಚೀನಾ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಕುರಿತಾಗಿ “ಗಲ್ವಾನ್ ಡಿಕೋಡೆಡ್:” ತನಿಖಾ ವರದಿ ಪ್ರಕಟಿಸಿದೆ.
ತನಿಖಾ ವರದಿ ಪ್ರಕಾರ, ಈ ಘರ್ಷಣೆಯಲ್ಲಿ ಭಾರತಕ್ಕಿಂತ ಹೆಚ್ಚಾಗಿ ಚೀನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಹೊಡೆದಾಟಕ್ಕಿಂತ ಹೆಚ್ಚಾಗಿ ನದಿಯನ್ನು ದಾಟುವಾಗ ಕನಿಷ್ಠ 38 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಚೀನಾ ಈ ಸಂಘರ್ಷದಲ್ಲಿ ಹೆಚ್ಚಿನ ನಷ್ಟ ಅನುಭವಿಸಿರುವುದು ತಮ್ಮ ವರದಿಯಿಂದ ಖಚಿತವಾಗಿದೆ ಎಂದು ದಿ ಕ್ಲಾಕ್ಸನ್ ಪತ್ರಿಕೆಯ ಸಂಪಾದಕ ಅಂಥೋನಿ ಕ್ಲಾನ್ ಹೇಳಿದ್ದಾರೆ. ಗಲ್ವಾನ್ ನಲ್ಲಿ ನಡೆದ ಎರಡು ಪ್ರತ್ಯೇಕ ಘರ್ಷಣೆಗಳ ಬಗ್ಗೆ ಸಾಕ್ಷ್ಯಗಳು ಹಾಗೂ ದೊರೆತ ಚಿತ್ರಗಳ ಆಧಾರದ ಮೇಲೆ ತನಿಖಾ ವರದಿ ಪ್ರಕಟಿಸಲಾಗಿದೆ. ಗಾಲ್ವಾನ್ ಘರ್ಷಣೆಯಲ್ಲಿ ಚೀನಾ ತನ್ನ ಸಾವುನೋವುಗಳನ್ನು ಬಹಿರಂಗಪಡಿಸದಿದ್ದರೂ, ಯುದ್ಧದಲ್ಲಿ ಮಡಿದ ತನ್ನ ನಾಲ್ವರು ಸೈನಿಕರಿಗೆ ಮರಣೋತ್ತರ ಪದಕಗಳನ್ನು ಘೋಷಿಸಿದೆ.
ಸತ್ಯ ಶೋಧನೆಗಾಗಿ ದಿ ಕ್ಲಾಕ್ಸಕ್ ಪತ್ರಿಕೆ, ಸ್ವತಂತ್ರವಾಗಿ ಸಾಮಾಜಿಕ ಮಾಧ್ಯಮ ಸಂಶೋಧಕರ ತಂಡವನ್ನು ನೇಮಿಸಿತ್ತು. ಇವರ ತನಿಖೆಯಿಂದ ಬೀಜಿಂಗ್ ಅಧಿಕೃತವಾಗಿ ಘೋಷಣೆ ಮಾಡಿದ ನಾಲ್ವರು ಸೈನಿಕರಿಗಿಂತ ಹಲವು ಪಟ್ಟು ಹೆಚ್ಚು ಸೈನಿಕರು ಘರ್ಷಣೆಯಲ್ಲಿ ಮೃತರಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
‘ಗಾಲ್ವಾನ್ ಡಿಕೋಡೆಡ್’ (‘Galwan Decoded)ಎಂಬ ಶೀರ್ಷಿಕೆಯಲ್ಲಿ ವರದಿಯಾಗಿದೆ. ಇದರಲ್ಲಿ ಜೂನ್ 15-16 ರ ಘರ್ಷಣೆಯ ಆರಂಭಿಕ ಹಂತಗಳಲ್ಲಿ, ವೇಗವಾಗಿ ಹರಿಯುವ ಶೂನ್ಯ ತಾಪಮಾನದ ಗಾಲ್ವಾನ್ ನದಿಯಲ್ಲಿ ಈಜಲು ಪ್ರಯತ್ನಿಸುವಾಗ ಅನೇಕ ಚೀನೀ ಸೈನಿಕರು ಮುಳುಗಿ ಸಾವಿಗೀಡಾಗಿದ್ದರು ಎಂದು ಹೇಳಲಾಗಿದೆ.
ಬೀಜಿಂಗ್‌ನಿಂದ ಅಧಿಕೃತವಾಗಿ ನಿಷೇಧಿಸಲ್ಪಟ್ಟ, ಚೈನೀಸ್ ಬ್ಲಾಗರ್ ಗಳು, ಸ್ಥಳೀಯ ನಾಗರೀಕರ ಹೇಳಿಕೆಗಳು ಹಾಗೂ ಚೀನಾ ಮಾಧ್ಯಮಗಳ ವರದಿಯನ್ನು ಒಂದು ವರ್ಷದವರೆಗೆ ಪರಿಶೀಲನೆ ಮಾಡಿ ತನಿಖಾ ವರದಿ ಪ್ರಕಟಿಸಲಾಗಿದೆ.
ವರದಿಯಲ್ಲಿ ಹೇಳಿಕೊಂಡಂತೆ, ಜೂನ್ 15 ರ ಘರ್ಷಣೆಯು ತಾತ್ಕಾಲಿಕ ಸೇತುವೆ ನಿರ್ಮಾಣಕ್ಕಾಗಿ ಪ್ರಾರಂಭವಾಯಿತು. ಭಾರತೀಯ ಸೈನಿಕರು ಮೇ 2020ರಲ್ಲಿ ಗಾಲ್ವಾನ್ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದರು. ಮತ್ತೊಂದೆಡೆ, ಪಿಎಲ್ಎ, ಏಪ್ರಿಲ್‌ನಿಂದ ಪರಸ್ಪರ ನಿರ್ಧರಿಸಿದ ಬಫರ್ ವಲಯದಲ್ಲಿ ಮೂಲಸೌಕರ್ಯ ನಿರ್ಮಿಸಲು ಆರಂಭಿಸಿತ್ತು.
ಜೂನ್ 6 ರಂದು, 80 ಪಿಎಲ್ಎ ಸೈನಿಕರು ಭಾರತದ ಕಡೆಯಿಂದ ರಚಿಸಲ್ಪಟ್ಟ ಸೇತುವೆ ಕೆಡವಲು ಬಂದಿದ್ದರು. ಇದನ್ನು ರಕ್ಷಿಸಲು 100 ಭಾರತೀಯ ಸೈನಿಕರು ಸ್ಥಳಕ್ಕೆ ಬಂದಿದ್ದರು ಎಂದು ವರದಿ ತಿಳಿಸಿದೆ. ತಾನು ನಿರ್ಮಾಣ ಮಾಡಿದ್ದ ವ್ಯವಸ್ಥೆಗಳನ್ನು ಕಿತ್ತುಹಾಕುವ ಬದಲು ಚೀನಾ ಸೇನೆಯು ಭಾರತೀಯ ಸೇನೆ ನಿರ್ಮಿಸಿದ್ದ ನದಿ ದಾಟುವ ಸೇತುವೆಯನ್ನು ರಹಸ್ಯವಾಗಿ ಕೆಡವಿ ಹಾಕಿತ್ತು ಎಂದು ವರದಿ ಹೇಳಿದೆ.
ಕರ್ನಲ್ ಸಂತೋಷ್ ಬಾಬು ಜೂನ್ 15 ರಂದು ವಿವಾದಿತ ಪ್ರದೇಶಕ್ಕೆ ತಮ್ಮ ಸೈನ್ಯದೊಂದಿಗೆ ಬಂದಿದ್ದರು. ಸಮಸ್ಯೆಯನ್ನು ಚರ್ಚಿಸುವ ಬದಲು, ಚೀನಾ ಸೇನಯ ಕರ್ನಲ್ ಫಾಬಾವೊ ತನ್ನ ಸೈನ್ಯಕ್ಕೆ ಯುದ್ಧ ವ್ಯೂಹ ರೂಪಿಸಲು ಆದೇಶಿಸಿದ್ದ.
ಕರ್ನಲ್ ಫಾಬಾವೊ ದಾಳಿ ಮಾಡಿದ ಮರುಕ್ಷಣವೇ ಭಾರತೀಯ ಸೇನಾ ಪಡೆಗಳು ಆತನನ್ನು ತಕ್ಷಣವೇ ಮುತ್ತಿಗೆ ಹಾಕಿದವು. “ಅವನನ್ನು ರಕ್ಷಿಸಲು, ಪಿಎಲ್ಎ ಬೆಟಾಲಿಯನ್ ಕಮಾಂಡರ್ ಚೆನ್ ಹಾಂಗ್ಜುನ್ ಮತ್ತು ಸೈನಿಕ ಚೆನ್ ಕ್ಸಿಯಾಂಗ್ರಾಂಗ್ ಭಾರತೀಯ ಸೇನೆಯ ಸ್ಥಳವನ್ನು ಪ್ರವೇಶಿಸಿದರು. ಅದಲ್ಲದೆ, ಉಕ್ಕಿನ ಕೊಳವೆಗಳು, ಕೋಲು ಹಾಗೂ ಕಲ್ಲುಗಳನ್ನು ಬಳಸಿ ತಮ್ಮ ಕಮಾಂಡರ್ ಅನ್ನು ಬಿಡಿಸಿಕೊಂಡು ಹೋಗುವ ಪ್ರಯತ್ನ ಮಾಡಿದರು. “363 ನೇ ರೆಜಿಮೆಂಟ್, ಫ್ರಾಂಟಿಯರ್ ಡಿಫೆನ್ಸ್, ಕ್ಸಿನ್‌ಜಿಯಾಂಗ್ ಮಿಲಿಟರಿ ಪ್ರದೇಶದ ಮೋಟಾರು ಇನ್ ಫೆಂಟ್ರಿ ಬೆಟಾಲಿಯನ್ ಸೈನಿಕ, ಕ್ಸಿಯಾವೊ ಸಿಯುವಾನ್ (Xiao Siyuan), ಘಟನೆಗಳನ್ನು ರೆಕಾರ್ಡ್ ಮಾಡುತ್ತಿದ್ದರು”. ಆದರೆ, ಈ ಘಟನೆ ಆದ ಬೆನ್ನಲ್ಲೇ ಕ್ಯಾಮೆರಾವನ್ನು ಬಿಟ್ಟು ದಾಳಿ ಮಾಡಲು ಆರಂಭಿಸಿದರು. ಭಾರತೀಯ ಸೈನಿಕನಿಂದ ತೀವ್ರವಾಗಿ ಗಾಯಗೊಂಡಿದ್ದ ಸಿಯುವಾನ್ ಸಾವಿಗೀಡಾಗಿದ್ದರು.
ಆ ಬಳಿಕ ಚೀನಾ ಸೈನಿಕರು ಪ್ರತಿರೋಧ ಒಡ್ಡಲು ಆರಂಭಿಸಿದ್ದರು. ವಾಟರ್ ಪ್ಯಾಂಟ್ ಗಳನ್ನು ಧರಿಸಲು ಕೂಡ ಚೀನಿ ಸೈನಿಕರಿಗೆ ಸಮಯವಿರಲಿಲ್ಲ. ಕತ್ತಲೆಯಲ್ಲಿ ಹಿಮದಂತಿದ್ದ ನದಿ ದಾಟಲು ವಾಂಗ್ ಝುರಾನ್ ನೇತೃತ್ವದಲ್ಲಿ ಪ್ರಯತ್ನ ನಡೆಸಲಾಯಿತು.
ನದಿಯು ಇದ್ದಕ್ಕಿದ್ದಂತೆ ಉಕ್ಕಿ ಗಾಯಗೊಂಡಿದ್ದ ಚೀನಾದ ಸೈನಿಕರು ನದಿಯಲ್ಲಿ ಜಾರಿ ಮುಳುಗಿ ಹೋಗುತ್ತಿದ್ದರು. ಆ ರಾತ್ರಿ ಕನಿಷ್ಠ 38 ಪಿಎಲ್ ಎ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ. ಆದರೆ ಚೀನಾ ಇದು ತಿರುಚಲಾದ ವರದಿ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಬ್ರಹ್ಮೋಸ್ ಕ್ಷಿಪಣಿಗೆ ಬಂತು ಭಾರೀ ಬೇಡಿಕೆ ; ಖರೀದಿಸಲು 17 ದೇಶಗಳು ಕ್ಯೂನಲ್ಲಿ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement