ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆಯಾಗಿದೆ. ಇಂದು, ಶುಕ್ರವಾರ ಹೊಸದಾಗಿ 14,950 ಜನರಿಗೆ ಸೋಂಕು ದಾಖಲಾಗಿದೆ. ಇದೇವೇಳೆ ರಾಜ್ಯದಲ್ಲಿ 53 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು 40,599 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,23,098 ರಷ್ಟಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,75,724 ಕ್ಕೆ ಏರಿದೆ.. ಒಟ್ಟು 37,13,343 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 10.93%ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಹೊಸದಾಗಿ 6,039 ಜನರಿಗೆ ಸೋಂಕು ಪತ್ತೆಯಾಗಿದ್ದು, ಇಂದು 15 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.35% ರಷ್ಟಿದೆ.
ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 175, ಬಳ್ಳಾರಿ 425, ಬೆಳಗಾವಿ 1,018, ಬೆಂಗಳೂರು ಗ್ರಾಮಾಂತರ 147, ಬೆಂಗಳೂರು ನಗರ 6,039, ಬೀದರ್ 106, ಚಾಮರಾಜನಗರ 201, ಚಿಕ್ಕಬಳ್ಳಾಪುರ 178, ಚಿಕ್ಕಮಗಳೂರು 73, ಚಿತ್ರದುರ್ಗ 177, ದಕ್ಷಿಣ ಕನ್ನಡ 319, ದಾವಣಗೆರೆ 122, ಧಾರವಾಡ 393, ಗದಗ 81, ಹಾಸನ 560, ಹಾವೇರಿ 321, ಕಲಬುರಗಿ 289, ಕೊಡಗು 316, ಕೋಲಾರ 197, ಕೊಪ್ಪಳ 173, ಮಂಡ್ಯ 488, ಮೈಸೂರು 944, ರಾಯಚೂರು 183, ರಾಮನಗರ 65, ಶಿವಮೊಗ್ಗ 543, ತುಮಕೂರು 656, ಉಡುಪಿ 201, ಉತ್ತರ ಕನ್ನಡ 313, ವಿಜಯಪುರ 191 ಮತ್ತು ಯಾದಗಿರಿಯಲ್ಲಿ 56 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ