ಮಂಗಳೂರು: ಅಪಾಯಕಾರಿ ಸಾಹಸ-ಆಳ ಬಾವಿಯಲ್ಲಿ ಬಿದ್ದಿದ್ದ ನಾಯಿಯನ್ನು ರಕ್ಷಿಸಿದ ಮಹಿಳೆ..ವೀಕ್ಷಿಸಿ

ಮಂಗಳೂರು: ಮಂಗಳೂರಿನಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಆಳವಾದ ಬಾವಿಗೆ ಬಬಿದ್ದಿದ್ದ ನಾಯಿಯನ್ನು ರಕ್ಷಿಸಿರುವ ಮನಮಿಡಿಯುವ ಘಟನೆ ನಡೆದ ವರದಿಯಾಗಿದೆ.
ಈ ವಿಡಿಯೋ ಅಂತರ್ಜಾಲದಲ್ಲಿ ಈಗ ವೈರಲ್ ಆಗಿದೆ. ವಿಡಿಯೊದಲ್ಲಿ, ಬಾವಿಯೊಳಗೆ ಆಕಸ್ಮಿಕವಾಗಿ ಬಿದ್ದ ನಾಯಿಯನ್ನು ಮಹಿಳೆ ಹಗ್ಗದ ಸಹಾಯದಿಂದ ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ.
ಇನ್ನೂ ಈ ವಿಡಿಯೋವನ್ನು ಮೌನಾ ಎನ್ನುವವರು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾಯಿಯನ್ನು ರಕ್ಷಿಸಿದ ಮಹಿಳೆಯನ್ನು ಆಶೀರ್ವದಿಸಿ” ಎಂದು ಅವರು ಬರೆದುಕೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇತರೇ ಜನರು ಈ ಮಹಿಳೆಯ ದೇಹಕ್ಕೆ ಹಗ್ಗವನ್ನು ಕಟ್ಟಿ ಮಹಿಳೆ ಬಾವಿಗೆ ಇಳಿಸಿದ್ದಾರೆ. ನಂತರ ಮತ್ತೊಂದು ಹಗ್ಗವನ್ನು ಎಸೆಯಲಾಗಿದ್ದು, ಅವಳು ಅದನ್ನು ನಾಯಿಯ ಸುತ್ತಲೂ ಕಟ್ಟಿದ್ದಾಳೆ. ನಂತರ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲಾಗಿದೆ. ನಂತರ ಮಹಿಳೆ ಬಾವಿಯಿಂದ ಹೊರ ಬಂದಿದ್ದಾರೆ. ನಾಯಿಯನ್ನು ಉಳಿಸಲು ಮಹಿಳೆ ಪಟ್ಟ ಸಾಹಸಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಕೆಲವರು ಅವಳನ್ನು ರಿಯಲ್‌ ಹೀರೋ ಎಂದು ಬಣ್ಣಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement