ಕರ್ನಾಟಕದಲ್ಲಿ ಶನಿವಾರ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆ..

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಶನಿವಾರ ಮತ್ತಷ್ಟು ಕಡಿಮೆಯಾಗಿದೆ. ಇಂದು ಹೊಸದಾಗಿ 12,009 ಕೊರೊನಾ ಸೋಂಕು ದಾಖಲಾಗಿದೆ.

ಇದೇವೇಳೆ ರಾಜ್ಯದಲ್ಲಿ ಸೋಂಕಿಗೆ 50 ಜನರು ಮೃತಪಟ್ಟಿದ್ದಾರೆ ಹಾಗೂ 25,854 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 1,09,203 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಮರಣ ಪ್ರಮಾಣ ಶೇ.0.41% ರಷ್ಟಿದೆ. ಪಾಸಿಟಿವಿಟಿ ರೇಟ್ 9.04%ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು ಶನಿವಾರ 4,532 ಹೊಸ ಸೋಂಕು ಪತ್ತೆಯಾಗಿದೆ ಹಾಗೂ ಸೋಂಕಿನಿಂದ 15 ಜನರು ಮೃತಪಟ್ಟಿದ್ದಾರೆ.
ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 122, ಬಳ್ಳಾರಿ 481, ಬೆಳಗಾವಿ 1,028, ಬೆಂಗಳೂರು ಗ್ರಾಮಾಂತರ 129, ಬೆಂಗಳೂರು ನಗರ 4,532, ಬೀದರ್ 93, ಚಾಮರಾಜನಗರ 186, ಚಿಕ್ಕಬಳ್ಳಾಪುರ 99, ಚಿಕ್ಕಮಗಳೂರು 66, ಚಿತ್ರದುರ್ಗ 436, ದಕ್ಷಿಣ ಕನ್ನಡ 252, ದಾವಣಗೆರೆ 82, ಧಾರವಾಡ 303, ಗದಗ 61, ಹಾಸನ 413, ಹಾವೇರಿ 171, ಕಲಬುರಗಿ 297, ಕೊಡಗು 373, ಕೋಲಾರ 132, ಕೊಪ್ಪಳ 129, ಮಂಡ್ಯ 275, ಮೈಸೂರು 763, ರಾಯಚೂರು 150, ರಾಮನಗರ 98, ಶಿವಮೊಗ್ಗ 419, ತುಮಕೂರು 342, ಉಡುಪಿ 202, ಉತ್ತರ ಕನ್ನಡ 217, ವಿಜಯಪುರ 126 ಮತ್ತು ಯಾದಗಿರಿಯಲ್ಲಿ 32 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಸೋನಿಯಾ ಗಾಂಧಿಗೆ ಸಿದ್ದರಾಮಯ್ಯರನ್ನು ಪರಿಚಯಿಸಿದ್ದೇ ನಾನು, ಲಾಟರಿ ಹೊಡೆದ್ರು ಸಿಎಂ ಆದ್ರು ; ಬಿ.ಆರ್. ಪಾಟೀಲ ಫೋನ್ ಕರೆ ಲೀಕ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement