8 ತಿಂಗಳ ಮಗುವಿನ ಮೇಲೆ ಕೇರ್‌ಟೇಕರ್‌ ಮಹಿಳೆ ಹಲ್ಲೆ : ಮಗು ಐಸಿಯುಗೆ ದಾಖಲು

ಸೂರತ್‌: ಭೀಕರ ಘಟನೆಯೊಂದರಲ್ಲಿ, ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ 8 ತಿಂಗಳ ಹಸುಳೆಯನ್ನು ಆತನ ನೋಡಿಕೊಳ್ಳುವ ಮಹಿಳೆ ನಿರ್ದಯವಾಗಿ ಥಳಿಸಿದ್ದಾರೆ. ಹಲ್ಲೆಯಿಂದ ಮಿದುಳು ರಕ್ತಸ್ರಾವಕ್ಕೊಳಗಾದ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಿಸಲಾಗಿದೆ.
ಕುಟುಂಬವು ಸೂರತ್‌ನ ರಾಂದರ್ ಪಾಲನ್‌ಪುರ್ ಪಾಟಿಯಾದಲ್ಲಿ ವಾಸಿಸುತ್ತಿದೆ. ಮಗುವಿನ ಪೋಷಕರು ಇಬ್ಬರೂ ಉದ್ಯೋಗಿಗಳಾಗಿದ್ದು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಕೇರ್‌ಟೇಕರ್ ಅನ್ನು ನೇಮಿಸಿಕೊಂಡಿದ್ದರು.
ಕೇರ್‌ಟೇಕರ್ ಮಗುವನ್ನು ಅಮಾನುಷವಾಗಿ ಥಳಿಸುವ ದೃಶ್ಯವನ್ನು ಸಿಸಿಟಿವಿ ಕ್ಯಾಮರಾ ಸೆರೆಹಿಡಿದಿದೆ.

ವಿಡಿಯೊದಲ್ಲಿ, ಕೇರ್‌ಟೇಕರ್‌ ಮಹಿಳೆ ಪದೇ ಪದೇ ಮಗುವಿನ ತಲೆಯನ್ನು ಹಾಸಿಗೆಯ ಮೇಲೆ ಬಡಿಯುತ್ತಿದ್ದಾರೆ.
ಘಟನೆಯ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಕೋಮಲ್ ಚಾಂಡ್ಲೇಕರ್ ಅವರನ್ನು ಮೂರು ತಿಂಗಳ ಹಿಂದೆ ಮಗುವನ್ನು ನೋಡಿಕೊಳ್ಳಲು ನೇಮಿಸಲಾಗಿದೆ. ಕೋಮಲ್ ಆರಂಭದಲ್ಲಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಆದರೆ, ಆಕೆಯ ಆಶ್ರಯದಲ್ಲಿ ಮಕ್ಕಳು ಅಳುವುದನ್ನು ಮುಂದುವರಿಸಿದ ನಂತರ ಅನುಮಾನ ಬಂದಿದೆ. ನಂತರ ಪೋಷಕರು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಭಯಾನಕ ವಿಷಯ ಬೆಳಕಿಗೆ ಬಂದಿದೆ ಎಂದು ಶಿಶುವಿನ ಅಜ್ಜಿ ಕಲಾಬೆನ್ ಪಟೇಲ್ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆಯೊಂದಿಗೆ ವರದಿ ಮಾಡಿದೆ.
8 ತಿಂಗಳ ಮಗುವಿನ ತಂದೆ ಮಿತೇಶ್ ಪಟೇಲ್, ಆರೋಪಿ ವಿರುದ್ಧ ಸೂರತ್‌ನ ರಾಂಡರ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗೆ ಮದುವೆಯಾಗಿ 5 ವರ್ಷವಾಗಿತ್ತು, ಆದರೆ ಅವಳಿಗೆ ಸ್ವಂತ ಮಗು ಇರಲಿಲ್ಲ.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement