ಕರ್ನಾಟಕದಲ್ಲಿ ಬಹುದಿನಗಳ ನಂತರ 10 ಸಾವಿರಕ್ಕಿಂತ ಕಡಿಮೆ ದೈನಂದಿನ ಕೊರೊನಾ ಸೋಂಕು ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಭಾನುವಾರ ಬಹುದಿನಗಳ ನಂತರ ದೈನಂದಿನ ಕೊರೊನಾ ಸೋಂಕು 10 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ರಾಜ್ಯದಲ್ಲಿ ಇಂದು 8,425 ಹೊಸ ಸೋಂಕು ದಾಖಲಾಗಿದ್ದು, ಇದೇ ಸಮಯದಲ್ಲಿ 47 ಜನರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇಂದು 19,800 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕಾರಾತ್ಮಕತೆ ದರ 6.51%ಕ್ಕೆ ಇಳಿದಿದೆ. ಒಟ್ಟು ರಾಜ್ಯದಲ್ಲಿ 97,781 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಮರಣ ಪ್ರಮಾಣ ಶೇ.0.55% ಇದೆ.
ಬೆಂಗಳೂರಿನಲ್ಲಿ ಇಂದು 3,822 ಹೊಸ ಸೋಂಕು ಪತ್ತೆಯಾಗಿದ್ದು, 17 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 81, ಬಳ್ಳಾರಿ 249, ಬೆಂಗಳೂರು ನಗರ 3822, ಬೆಳಗಾವಿ 221, ಬೆಂಗಳೂರು ಗ್ರಾಮಾಂತರ 92, ಬೀದರ್ 75, ಚಾಮರಾಜನಗರ 161, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 87, ಚಿತ್ರದುರ್ಗ 183, ದಕ್ಷಿಣ ಕನ್ನಡ 163, ದಾವಣಗೆರೆ 56, ಧಾರವಾಡ 211, ಗದಗ 50, ಹಾಸನ 276, ಹಾವೇರಿ 88, ಕಲಬುರಗಿ 195, ಕೊಡಗು 219, ಕೋಲಾರ 114, ಕೊಪ್ಪಳ 99, ಮಂಡ್ಯ 241, ಮೈಸೂರು 582, ರಾಯಚೂರು 34, ರಾಮನಗರ 45, ಶಿವಮೊಗ್ಗ 183, ತುಮಕೂರು 318, ಉಡುಪಿ 175, ಉತ್ತರ ಕನ್ನಡ 141, ವಿಜಯಪುರ 135 ಮತ್ತು ಯಾದಗಿರಿಯಲ್ಲಿ 29 ಕೊರೊನಾ ಸೋಂಕು ದಾಖಲಾಗಿದೆ

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement