ತಿರುಗಿ ಬಿದ್ದ ನಾಯಿ.. ದಾಳಿ ಮಾಡಿದ ಚಿರತೆಯೇ ಪರಾರಿ..! ದೃಶ್ಯ ವಿಡಿಯೊದಲ್ಲಿ ಸೆರೆ

ಚಿರತೆಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು. ಅದರಲ್ಲಿಯೂ ಹೊಂಚು ಹಾಕಿ ಬೇಟೆಯಾಡುವ ಪ್ರಾಣಿ. ಇತ್ತೀಚಿಗಂತೂ ಮನೆಯ ಬಳಿಯೇ ಬರುವ ಚಿರತೆಗಳು ನಾಯಿಗಳನ್ನು ಹೊತ್ತುಕೊಂಡು ಹೋಗುವುದು ಸಾಮಾನ್ಯವಾಗಿ ಆದರೆ ಅನೇಕ ಸಲ ನಾಯಿಗಳು ಸಹ ಚಿರತೆ ಹೆದರದೇ ಚಿರತೆ ವಿರುದ್ಧವೇ ತಿರುಗಿ ಬಿದ್ದು ಹೋರಾಟ ಮಾಡಿ ಪಾರಾಗಿದ್ದೂ ಇವೆ. ಇಂತಹದ್ದೇ ಒಂದು ವಿಡಿಯೊದಲ್ಲಿ ನಾಯಿಯೊಂದು ಚಿರತೆಯನ್ನು ಧೈರ್ಯದಿಂದ ಎದುರಿಸಿ ಚಿರತೆಯೇ ಕಾಲ್ಕೀಳುವಂತೆ ಮಾಡಿದೆ.

ಈ ವಿಡಿಯೊ ಈಗ ವೈರಲ್ ಆಗುತ್ತಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದು, ಕಾಡಿನ ರಸ್ತೆಯಲ್ಲಿ ಮಲಗಿದ್ದ ನಾಯಿಯ ಮೇಲೆ ಚಿರತೆಯು ದಾಳಿ ಮಾಡುವುದನ್ನು ಕಾಣಬಹುದಾಗಿದೆ. ನಾಯಿ ರಸ್ತೆಯಲ್ಲಿ ಸುಮ್ಮನೆ ಮಲಗಿದ್ದಾಗ ಗೊತ್ತಾಗದಂತೆ ಬಂದು ಒಮ್ಮೆಗೇ ದಾಳಿ ಮಾಡುವ ಚಿರತೆ ಸೀದ ನಾಯಿಯ ಪಕ್ಕವೇ ಹಾರಿ ಬಂದು ನಿಲ್ಲುತ್ತದೆ. ಅಷ್ಟರಲ್ಲಿ ಧಟ್ಟನೆ ನಿದ್ದೆಯಿಂದ ಏಳುವ ಶ್ವಾನ ಚಿರತೆ ಕಂಡು ಓಡದೆ ತಿರುಗಿ ನಿಲ್ಲುತ್ತದೆ. ಜೋರಾಗಿ ಬೊಗಳುವ ಮೂಲಕ ಚಿರತೆಗೇ ಹೆದರಿಕೆ ಬರುವಂತೆ ಮಾಡುವುದನ್ನು ವಿಡಿಯೊದಲ್ಲಿ ಕಾಣಬಹುದು. ನಾಯಿಯ ಧೈರ್ಯ ಹಾಗೂ ಪ್ರತಿರೋಧಕ್ಕೆ ಚಿರತೆಯೇ ಕಾಲ್ಕಿತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement