ಕರ್ನಾಟಕದಲ್ಲಿ ಮಂಗಳವಾರ ದೈನಂದಿನ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿವೆ. ಇಂದು, ಮಂಗಳವಾರ ಹೊಸದಾಗಿ 4,452 ಕೊರೊನಾ ಸೋಂಕು ದಾಖಲಾಗಿದೆ. ಇದೇ ಸಮಯದಲ್ಲಿ ಸೋಖಿನಿಂದ. 51 ಜನರು ಮೃತಪಟ್ಟಿದ್ದಾರೆ.

ಇಂದು ಸೋಂಕಿನಿಂದ 19,067 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 72,414 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದಾಗಿ ಇದುವರೆಗೆ 39,447 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 2,139 ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಸಕಾರಾತ್ಮಕತೆ ದರ 5.01 ಇದೆ. ಮೃತಪಟ್ಟವವರ ದರ ಶೇ.1.14 ಇದೆ.

ಜಿಲ್ಲಾವಾರು ಮಾಹಿತಿ..:
ಬಾಗಲಕೋಟೆ 28, ಬಳ್ಳಾರಿ 64, ಬೆಳಗಾವಿ 352, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 2,139, ಬೀದರ್ 25, ಚಾಮರಾಜನಗರ 75, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 50, ಚಿತ್ರದುರ್ಗ 89, ದಕ್ಷಿಣ ಕನ್ನಡ 146, ದಾವಣಗೆರೆ 20, ಧಾರವಾಡ 102, ಗದಗ 22, ಹಾಸನ 103, ಹಾವೇರಿ 36, ಕಲಬುರಗಿ 73, ಕೊಡಗು 81, ಕೋಲಾರ 33, ಕೊಪ್ಪಳ 99, ಮಂಡ್ಯ 45, ಮೈಸೂರು 222, ರಾಯಚೂರು 28, ರಾಮನಗರ 30, ಶಿವಮೊಗ್ಗ 122, ತುಮಕೂರು 221, ಉಡುಪಿ 64, ಉತ್ತರ ಕನ್ನಡ 49, ವಿಜಯಪುರ 53 ಮತ್ತು ಯಾದಗಿರಿಯಲ್ಲಿ 17 ಪಾಸಿಟಿವ್ ಪ್ರಕರಣ ದಾಖಲಾಗಿದೆ

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement